Uttara Kannada

ಮುಖ್ಯನ್ಯಾಯ ಮೂರ್ತಿ ಗವಾಯಿ ಮೇಲೆ ಚಪ್ಪಲಿ ಎಸೆತ ಪ್ರಕರಣ ದಲ್ಲಿ ಬಿಜೆಪಿ ಮೌನವೇಕೆ? : -ಕೆ .ಶಂಭು ಶೆಟ್ಟಿ ಪ್ರಶ್ನೆ

ಕಾರವಾರ : ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮೇಲೆ ವಕೀಲ ರಾಜೇಶ್ ಕಿಶೋರ್ ಎಂಬುವವರು ಶೂ ಎಸೆವ ಪ್ರಯತ್ನದ ವಿರುದ್ಧ ದೇಶದೆಲ್ಲೆಡೆ ಖಂಡನೆ, ಪ್ರತಿಭಟನೆ ನಡೆಯುತ್ತಿದ್ದರೂ, ಕರ್ನಾಟಕ ಬಿಜೆಪಿ ಮೌನ ವಾಗಿದೆ. ಇದು ಭಾರತೀಯ ಜನತಾ ಪಕ್ಷದ ದಲಿತ ವಿರೋಧಿ ನೀತಿಯನ್ನು ಪ್ರತಿಬಿಂಬಿಂಬಿಸುತ್ತಿದೆ ಎಂದು ಕೆಪಿಸಿಸಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ ಹೇಳಿದ್ದಾರೆ.
ಈ ಸಂಬಂಧ ಅವರು ಮಾಧ್ಯಮಗಳಿಗೆ ಬುಧುವಾರ ಲಿಖಿತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಗವಾಯಿ ಇವರು ದಲಿತ ಸಮುದಾಯಕ್ಕೆ ಸೇರಿದವರಾಗಿರುವ ಕಾರಣ, ಬಿಜೆಪಿ ಪಕ್ಷಕ್ಕೆ ಇವರನ್ನು ಸಹಿಸಲಾಗುತ್ತಿಲ್ಲ. ಬಿಜೆಪಿ ಮತ್ತು ಅದರ ಮಾತೃ ಸಂಸ್ಥೆಗಳು ಶತಮಾನಗಳಿಂದ ದಲಿತವಿರೋಧಿ ನೀತಿಯನ್ನು ಅನುಸರಿಸಿಕೊಂಡು ಬಂದವರಾಗಿದ್ದಾರೆ. ದಲಿತರನ್ನು ತಮ್ಮ ಜೀತದಾಳಾಗಿ ದುಡಿಸಿಕೊಂಡು, ದಲಿತರಿಗೆ ಕವಡೆ ಕಾಸಿನ ಕಿಮ್ಮತ್ತನ್ನೂ ಸಂಘ ಪರಿವಾರದವರು ನೀಡುತ್ತಿರಲಿಲ್ಲ. ಇಂದಿಗೂ ಇದೇ ರೀತಿಯ ಧೋರಣೆ ಯನ್ನು ಮುಂದುವರಿಸಿಕೊಂಡು ಹೋಗುತಿದ್ದಾರೆ ಎಂದು ಟೀಕಿಸಿದ್ದಾರೆ.

ಡಾ.ಬಾಬಾಸಾಹೇಬ್ ಅಂಬೇಡ್ಕರ್ ನಮ್ಮ ಸಂವಿಧಾನದ ಮೂಲಕ ನೀಡಿರುವ ಮೀಸಲಾತಿ ಸವಲತ್ತನ್ನು ಕಾಂಗ್ರೆಸ್ ಸರಕಾರ ದೇಶದಾದ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದರ ಪರಿಣಾಮ, ಇಂದು ದಲಿತರು ಸಮಾಜದಲ್ಲಿ ಬಲಿಷ್ಠ ವರ್ಗಕ್ಕೆ ನಾವೇನು ಕಡಿಮೆ ಇಲ್ಲ , ಎಂಬಂತೆ ತಲೆ ಎತ್ತಿ ತಿರುಗಾಡುತ್ತಿದ್ದಾರೆ.

ಮನುವಾದವನ್ನು ತನ್ನ ಸಂವಿಧಾನವನ್ನಾಗಿ ಒಪ್ಪಿಕೊಂಡಿರುವ ಸಂಘಪರಿವಾರಕ್ಕೆ , ದಲಿತರ ಈ ಶ್ರೇಯೋಭಿವೃದ್ಧಿ ಯನ್ನು ಸಹಿಸಲಾಗುತ್ತಿಲ್ಲ. ಯಾಕೆಂದರೆ ಮನುವಾದದಲ್ಲಿ ದಲಿತರನ್ನು ಮನುಷ್ಯರೆಂದೇ ಗುರುತಿಸುತ್ತಿರಲಿಲ್ಲ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರು ಬ್ರಹ್ಮ ದೇವನ ಒಂದೊಂದು ಭಾಗದಿಂದ ಜನ್ಮ ತಾಳಿದ್ದು ಎಂದು ಮನುವಾದ ಹೇಳುತ್ತಿದ್ದರೆ ,ಇಲ್ಲಿ ದಲಿತರ ಹುಟ್ಟಿನ ಪ್ರಸ್ತಾಪವೇ ಇಲ್ಲ .ಸಂವಿಧಾನ ದತ್ತ ಹಕ್ಕಿನ ಫಲವಾಗಿ ದಲಿತರು ಇಂದು ಬೆಳೆಯುವುದನ್ನು ಸಹಿಸದ ಬಿಜೆಪಿ , ಅವರಿಗೆ ಅನ್ಯಾಯ ಅವಮಾನ ನಡೆದರೂ ತುಟಿಪುಟಿಕ್ಕೆನ್ನದೆ ಸುಮ್ಮನಿರುತ್ತದೆ . ಇದಕ್ಕೆಂದೇ ಕಾರವಾರದ ಬಿಜೆಪಿಗರು ಸೇರಿದಂತೆ ಕರ್ನಾಟಕದ ಬಿಜೆಪಿ ನಾಯಕರು ಅಧಿಕೃತವಾಗಿ ದಲಿತ ಮುಖ್ಯ ನ್ಯಾಯಮೂರ್ತಿ ಗವಾಯಿಯವರ ಮೇಲೆ ನಡೆದ ಚಪ್ಪಲಿ ಎಸೆತ ಕ್ರಮವನ್ನು ಖಂಡಿಸುತ್ತಿಲ್ಲ ಯಾಕೆ ಎಂದು ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ ಪ್ರಶ್ನಿಸಿದ್ದಾರೆ.
…..

Back to top button