Uttara Kannada

ಆಲಿವ್ ರಿಡ್ಲೆ ಕಡಲಾಮೆ ಕಳೆಬರಹ ಪತ್ತೆ

ಕಾರವಾರ: ನಗರದ ರವೀಂದ್ರನಾಥ ಟಾಗೋರ್ ಕಡಲತೀರದಲ್ಲಿ ಆಲಿವ್ ರಿಡ್ಲಿ ಜಾತಿಯ ಕಡಲಾಮೆ ಕಳೆಬರಹ ಪತ್ತೆಯಾಗಿದೆ.‌ ಈ ವರ್ಷ ಮೃತಪಟ್ಟ ಎರಡನೇ ಆಲಿವ್ ರಿಡ್ಲೆ ಆಮೆ ಇದಾಗಿದೆ. ಅರಬ್ಬೀ ಸಮುದ್ರದ ಕಾರವಾರ ದಿಂದ ಹಾರವಾಡ ಕಡಲತೀರದ ತನಕ ಆಲಿವ್ ಜಾತಿಯ ಆಮೆಗಳ ಸಂಖ್ಯೆ ಹೆಚ್ಚಾಗಿದೆ.

ಕಡಲತೀರದ ವಾರ್ ಶಿಪ್ ಚಾಪೆಲ್ ಮ್ಯೂಸಿಯಂ ಬಳಿ ಕಡಲತೀರದಲ್ಲಿ ಬುಧವಾರ ಸತ್ತ ಕಡಲಾಮೆ ಪತ್ತೆಯಾಗಿದ್ದು, ಅರಣ್ಯ ಇಲಾಖೆ ಹಾಗೂ ಮರೈನ್ ಎಸ್‌ಪಿಎಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

ಕಡಲಾಮೆ ಕೆಲ ದಿನಗಳ ಹಿಂದೆಯೇ ಮೃತಪಟ್ಟಿರುವ ಸಾಧ್ಯತೆಯಿದ್ದು, ದೇಹ ಕೊಳೆತಿದ್ದರಿಂದ ಸಾವಿನ ನಿಖರ ಕಾರಣ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಬಳಿಕ ಅಧಿಕಾರಿಗಳ ಸಮ್ಮುಖದಲ್ಲಿ ಕಡಲತೀರದಲ್ಲಿಯೇ ಆಮೆಯನ್ನು ಹೂಳಲಾಯಿತು.

ಸಮುದ್ರದಲ್ಲಿ ಮೀನುಗಾರಿಕೆ ಚಟುವಟಿಕೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೀನುಗಾರಿಕಾ ಬಲೆಗೆ ಸಿಲುಕಿ, ಯಂತ್ರಚಾಲಿತ ಬೋಟ್ ಗೆ ಸಿಲುಕಿ ಆಮೆ ಮೃತಪಟ್ಟಿರಬಹುದು ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ.

Back to top button