
Uttara Kannada
ಉ.ಕ | ಮಹಿಳೆ ನಾಪತ್ತೆ
ಕಾರವಾರ : ಮುಂಡಗೋಡು ನಂದಿಶ್ವರನಗರದ ನಿವಾಸಿ ಆದಿತಿ ಆನಂದ ಬಸ್ತಾವಾಡ (29 ವರ್ಷ) ಎಂಬಾಕೆ 7 ಮಾರ್ಚ 2025 ರಂದು ಕಾಣೆಯಾಗಿದ್ದಾಳೆ. ಮನೆಯಲ್ಲಿ ಕೆಲಸ ಮುಗಿಸಿ, ಅಡುಗೆ ಮಾಡಿ , ತಮ್ಮದೇ ಹೋಟೇಲ್ಗೆ ಬರುವುದಾಗಿ ಹೇಳಿದವಳು, ಮಾರ್ಚ ತಿಂಗಳ ಏಳರಂದು ಸಂಜೆ 4 ಗಂಟೆಯಾದರು ಹೋಟೆಲಿಗೆ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಎಲ್ಲೋ ಕಾಣೆಯಾಗಿದ್ದಾಳೆ.
ಮನೆಯಿಂದ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾಳೆಂದು ಕುಟುಂಬದವರು ದೂರು ನೀಡಿದ್ದಾರೆ. ಮಹಿಳೆಯ ಚಹರೆ: ಗೋಧಿ ಬಣ್ಣ, ಸಾಧಾರಣ ಮೈ ಕಟ್ಟು, ಉದ್ದನೆಯ ಮುಖ, ಕಪ್ಪು ಬಿಳಿ ಮಿಶ್ರಿತ ಟೀ ಶರ್ಟ್ ಹಾಗೂ ನೈಟ್ ಪ್ಯಾಂಟ್ ಧರಿಸಿರುತ್ತಾಳೆ. ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾಳೆ. ಇವರು ಸಾರ್ವಜನಿಕರಿಗೆ ಕಂಡು ಬಂದಲ್ಲಿ ಮುಂಡಗೋಡ ಪಿಎಸ್ ದೂ.ಸಂ:08301222211, ಎಸ್ಡಿಪಿಒ: 08384-226424, ಡಿಪಿಒ: 08382-226233, ರೇಂಜ್: 82422-20501 ನ್ನು ಸಂಪರ್ಕಿಸುವಂತೆ ಮುಂಡಗೋಡ ಠಾಣೆಯ ಪೊಲೀಸ್ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. …




