ಬಿಜೆಪಿಗರು ಕೋಮುಭಾವನೆ ಕೆರಳಿಸುವ ಕೆಲಸ ಮಾಡುತ್ತಿದ್ದಾರೆ: ಬಿಜೆಪಿ ವಿರುದ್ಧ ಸಚಿವ ಸಂತೋಷ ಲಾಡ್ ವಾಗ್ದಾಳಿ

ವಿಜಯಪುರ: ದೇಶದಲ್ಲಿ ಬೆಲೆ ಏರಿಕೆ ಕುರಿತು, ನಿರುದ್ಯೋಗ ಕುರಿತು, ಆರ್ಥಿಕ ದುಃಸ್ಥಿತಿ ಕುರಿತು ಮಾತನಾಡದೇ ಕೇವಲ ಜನರ ಭಾವನೆ ಕೆರಳಿಸುವ ಮಾತುಗಳನ್ನು ಬಿಜೆಪಿಗರು ಆಡುತ್ತಿದ್ದಾರೆ. ಹೇಳಿಕೊಳ್ಳಲು ಯಾವುದೇ ಸಾಧನೆ ಇಲ್ಲದ ಕಾರಣ ಬಿಜೆಪಿಗರು ಕೋಮುಭಾವನೆ ಕೆರಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಾರ್ಮಿಕ ಸಚಿವ ಸಂತೋಷ ಲಾಡ್ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನ, ಮುಸ್ಲಿಂ, ರಾಮ ಮಂದಿರ ಇದಿಷ್ಟು ಬಿಟ್ಟರೆ ಬಿಜೆಪಿ ಯಾವುದೇ ವಿಷಯ ಮಾತನಾಡುತ್ತಿಲ್ಲ. ಇಂತಹ ಹೇಳಿಕೆಗಳಿಂದ ಬಿಜೆಪಿಗರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.

ಅದಾನಿ ಪೋರ್ಟ ನಲ್ಲಿ ಡ್ರಗ್ಸ್ ಸಿಕ್ಕಿದೆ ಆ ಬಗ್ಗೆ ಮಾತನಾಡಲ್ಲ ಏಕೆ? ಐಪಿಎಲ್ ನಲ್ಲಿ ಎಷ್ಟು ಜನ ಸತ್ತಿದ್ದಾರೆ? ನಿರುದ್ಯೋಗ ಎಷ್ಟು ಹೆಚ್ಚಾಗಿದೆ? ಬಿಎಸ್ ಎನ್ ಎಲ್ ಮಾರಾಟ ಮುಚ್ಚಿದರು, ಪೋರ್ಟ್ ಮಾರಿದರು, ಬೀಪ್ ರಫ್ತಿನಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಜಿಡಿಪಿ ಕುಸಿದಿದೆ. ಚುನಾವಣೆ ಬಾಂಡ್ ನಲ್ಲಿ ಹಗರಣ ಆಗಿದೆ ಆದರೂ ಈವರೆಗೂ ಈ ಬಗ್ಗೆ ಬಿಜೆಪಿ ಮಾತನಾಡುತ್ತಿಲ್ಲವೇಕೆ? ಎಂದು ಪ್ರಶ್ನೆಗಳ ಸುರಿಮಳೆಗೈದರು.

ಮೋದಿಯವರು ಹೋದಲ್ಲೆಲ್ಲ ಜೈ ಶ್ರೀರಾಮ ಎನ್ನುತ್ತಾರೆ ಇದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಅಲ್ಲವಾ? ಎಂದು ಪ್ರಶ್ನಿಸಿದರು. ಇನ್ನು ಇವಿಎಂನಲ್ಲಿ ತೊಂದರೆ ಕಂಡು ಬರುತ್ತಿದೆ. ಕಾಸರಗೋಡಿನಲ್ಲಿ ಗೊಂದಲ ಸೃಷ್ಠಿಯಾಗಿದೆ. ಈ ಬಗ್ಗೆ ಸ್ಪಷ್ಟನೆ ಸಿಗಬೇಕಲ್ಲವೆ ಎಂದರು.
ಯತ್ನಾಳ ಗುಜರಾತಗೆ ಹೊಗೇಬೇಕು, ದೇಶದಲ್ಲಿ 13.13 ಲಕ್ಷ ಮಹಿಳೆಯರು ಕಾಣೆಯಾಗಿದ್ದಾರೆ. ಗುಜರಾತ್ ನಲ್ಲಿ ದಿನಕ್ಕೊಂದು ರೇಪ್ ಆಗುತ್ತೆ. ಆ ಬಗ್ಗೆ ಯತ್ನಾಳರು ಮಾತನಾಡಲಿ. ನೇಹಾ ಕೊಲೆ ಪ್ರಕರಣ ಎಲ್ಲರಿಗೂ ನೋವಿದೆ. ಆದರೆ, ಬೇರೆ ಕೊಲೆಗಳಾದಾಗ ಬಿಜೆಪಿಗರು ಏಕೆ ಹೋಗಲಿಲ್ಲ? ಸುಮ್ಮನೇ ವೈಭವೀಕರಿಸುವುದು ಸರಿಯಲ್ಲ ಎಂದರು.
ನಮ್ಮ ಮೇಲೆ ಸುಳ್ಳು ಆರೋಪಗಳನ್ನು ಬಿಜೆಪಿಯವರು ಮಾಡುತ್ತಿದ್ದಾರಲ್ಲ ಸರ್ಕಾರ ಇಂತಹ ಕೆಲಸಗಳಿಗೆ ಪ್ರಚೋದನೆ ನೀಡುತ್ತದೆಯೇ? ಮುಖ್ಯಮಂತ್ರಿಗಳು ಇಂತಹ ಪ್ರಕರಗಳಿಗೆ ಬೆಂಬಲ ಕೊಟ್ಟಿದ್ದಾರಾ? ನಾವು ಆರೋಪಿಗಳಿಗೆ ಯಾಕೆ ಉಳಿಸಲು ಪ್ರಯತ್ನಿಸಬೇಕು? ಆರೋಪಿಗಳಿಗೆ ಬೆಂಬಲಿಸುವುದರಿಂದ ನಮಗೇನು ಲಾಭ ಇದೆ? ಸುಮ್ಮನೆ ಏನೊ ಆರೋಪ ಮಾಡುವುದು. ಏನೊ ಅಡ್ವಾನ್ಟೇಜ್ ಇದೆ ಎಂದು ಬರೋದು ಏನೆನೋ ಮಾತಾಡೋದಾ. ಮಂಗಳೂರಲ್ಲಿ ಒಂದೆ ಕುಟುಂಬದ ನಾಲ್ಕು ಜನರನ್ನು ಕೊಲೆ ಮಾಡಲಾಯಿತು ಆ ಪ್ರಕರಣವೇಕೆ ಹೈಪ್ ಆಗಲಿಲ್ಲ ಅದರಲ್ಲಿ ಮುಸ್ಲಿಂ ಆರೋಪಿ ಇಲ್ಲವಂತನಾ? ಎಲ್ಲೆ ಹಿಂದುಗಳ ಮೇಲೆ ಏನೆ ಆಗಲಿ ಆರೋಪಿ ಮುಸ್ಲಿಂ ಇದ್ದರೆ ಮಾತ್ರ ಬಿಜೆಪಿಗರು ಬರುವುದು ಬೇರೆ ಹಿಂದುಗಳಿಗೆ ಏನೆ ಆದರೂ ನಡಿಯುತ್ತೆ ಅವರಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎನ್ ಕೌಂಟರ್ ಪಾಲಿಸಿ ಮಾಡಲಿ ಬಿಜೆಪಿ ನೋಡೋಣ, ಮೋದಿ ಮಾತನಾಡೋದು ಹೋಗೋದು ಅಲ್ಲ. ಕಠಿಣ ಕಾನೂನು ರೂಪಿಸಲಿ ನೋಡೋಣ. ಐಪಿಸಿ ಸೆಕ್ಷನ್ ಮಾಡಬೇಕಿರುವುದು ಮೋದಿ ಅವರು ಅಲ್ವಾ ಮಾಡಲಿ. ಫಾಸ್ಟಟ್ರ್ಯಾಕ್ ತಂದು ಇಂತಹ ಪ್ರಕರಣಗಳಲ್ಲಿ ಎನ್ಕೌಂಟರ್ ಮಾಡುವ ಪಾಲಿಸಿ ತರಲಿ ಎಂದರು.

ದಿಂಗಾಲೇಶ್ವರ ಸ್ವಾಮಿಜಿ ವಿರುದ್ಧ ಯತ್ನಾಳ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಲಾಡ್, ಯತ್ನಾಳರು ಯುನಿವರ್ಸಲ್ ಗುರು ಇದ್ದ ಹಾಗೆ, ಅವರು ಹಾರಿಕೆ ಉತ್ತರ ಕೊಟ್ಟು ಹೋಗ್ತಾರೆ. ನನ್ನ ಬಗ್ಗೆ ಏನಾದ್ರೂ ಮಾತನಾಡುತ್ತಾರೆ. ಯಾವ ನೋಟು ಕೊಟ್ಟಿದ್ದಾರೆ. ಎಷ್ಟು ಕೊಟ್ಟಿದ್ದಾರೆ ಅವರನ್ನು ಕೇಳಬೇಕು. ಶಾಸಕ ಯತ್ನಾಳ್ ಅವರ ಐನ್ ಸ್ಟ್ಯಾನ್ ಥೇರಿ ನಮಗೆ ಗೊತ್ತಾಗಲ್ಲ. ಅವರದು ಯಾಕೆ ನನಗೆ ಕೇಳ್ತಿರಾ ಅವರನ್ನೆ ಕೇಳಿ ಎಂದು ಶಾಸಕ ಯತ್ನಾಳ್ ಕುರಿತು ವ್ಯಂಗ್ಯವಾಡಿದರು.

18ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಸುಳ್ಳು ಭರವಸೆ ಜನರಿಗೆ ಅರಿವಾಗಿದೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಕೈ ಹಿಡಿಯುವ ವಿಶ್ವಾಸ ಇದೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.

ಕರ್ನಾಟಕದಲ್ಲಿ ಸುಮಾರು 18 ಸ್ಥಾನಗಳಲ್ಲಾದರೂ ಕಾಂಗ್ರೆಸ್ ಗೆಲ್ಲಲಿದೆ. ಕಾಂಗ್ರೆಸ್ ನ ಈ ಹಿಂದಿನ ಸಾಧನೆಗಳೇ ಇಂದಿಗೂ ಬಡವರ ಕೈ ಹಿಡಿದಿವೆ. ಫಸಲ್ ಬಿಮಾ ಯೋಜನೆಯಿಂದ ರೈತರಿಗಿಂತ ಕಾರ್ಪೋರೆಟ್ ಸಂಸ್ಥೆಗಳಿಗೇ ಹೆಚ್ಚಿನ ಅನುಕೂಲವಾಗಿದೆ. ಈ ಎಲ್ಲ ವಿಚಾರ ಇಟ್ಟುಕೊಂಡು ಕಾಂಗ್ರೆಸ್ ಜನರ ಮುಂದೆ ಹೋಗುತ್ತಿದೆ ಎಂದರು.

ಶಾಸಕ ವಿಠಲ ಕಟಕದೊಂಡ, ಅಭ್ಯರ್ಥಿ ರಾಜು ಆಲಗೂರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಕಾಂತಾ ನಾಯಕ, ಅಬ್ದುಲ್ ಹಮೀದ್ ಮುಶ್ರೀಫ್ ಮತ್ತಿತರರಿದ್ದರು.

Latest Indian news

Popular Stories