ಕುಟುಂಬ ರಾಜಕಾರಣ ಬಿಟ್ಟು ಜಿಲ್ಲೆಗೆ ನಿಮ್ಮ ಕೊಡುಗೆ ಏನು?: ಹಾಲಿ ಸಚಿವರಿಗೆ ಮಾಜಿ ಸಚಿವರ ಪ್ರಶ್ನೆ

ವಿಜಯಪುರ : ಕುಟುಂಬ ರಾಜಕಾರಣ ಮಾಡುವ ಸಚಿವ ಶಿವಾನಂದ ಪಾಟೀಲ ಸಭ್ಯ ರಾಜಕಾರಣಿ ಜಿಗಜಿಣಗಿ ಅವರನ್ನು ಗೊಡ್ಡು ಎಮ್ಮೆಗೆ ಹೋಲಿಸಿರುವದು ಖಂಡನೀಯ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೇಟ್ಟಿ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಂಸದ ರಮೇಶ ಜಿಗಜಿಣಗಿ ಸ್ವಚ್ಚ ರಾಜಕಾರಣಿ, ಅಭಿವೃದ್ಧಿಪರ ಚಿಂತಕ ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರದಿಂದ 75 ಸಾವಿರ ಕೋಟಿಗಿಂತಲೂ ಅಧಿಕ ಹಣ ತಂದಿದ್ದಾರೆ. ಹೈವೆ ರಸ್ತೆ, ರೈಲು ನಿಲ್ದಾಣ ಅಭಿವೃದ್ಧಿ, ಗೂಡ್ಸ್ ಸೇಡ್, ಕೂಡಗಿ ಥರ್ಮಲ್ ಸೇರಿದಂತೆ ಅನೇಕ ದೊಡ್ಡ ಕೆಲಸಗಳನ್ನು ಮಾಡಿ ವಿಜಯಪುರದ ಉನ್ನತಿಗೆ ಶ್ರಮಿಸಿದ್ದಾರೆ. ನೀವು ಏನು ಮಾಡಿದ್ದಿರಿ ಕೇವಲ ಕುಟುಂಬ ರಾಜಕಾರಣ ಮಾಡಿದ್ದು ಬಿಟ್ಟರೆ ಜಿಲ್ಲೆಗೆ ನಿಮ್ಮ ಕೊಡುಗೆ ಏನು ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಓರ್ವ ಹಿರಿಯ ಹಾಗೂ ಸಭ್ಯ ರಾಜಕಾರಣಿ ಜಿಗಜಿಣಗಿಯವರನ್ನು ಗೊಡ್ಡು ದನಕ್ಕೆ ಹೋಲಿಸುವ ಕಿಳುಮಟ್ಟಕ್ಕೆ ಸಚಿವ ಶಿವಾನಂದ ಪಾಟೀಲ ಇಳಿಯಬಾರದಿತ್ತು. ಆತನಿಗೆ ಬುದ್ದಿ ಇಲ್ಲ. ಇಷ್ಟು ವರ್ಷ ರಾಜಕಾರಣ ಮಾಡಿರುವ ಪಾಟೀಲಗೆ ಬುದ್ದಿ ಇದ್ದಿದ್ದರೇ ಹೀಗೆ ಮಾತನಾಡುತ್ತಿರಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಜಿಗಜಿಣಗಿ ಹಿಂಡುವುದಿಲ್ಲ ಎನ್ನುತ್ತೀರಿ, ಹಿಂಡುವುದರ ಅರ್ಥ ಏನು? ನೀವು ಎಷ್ಟು? ಹಿಂಡಿದ್ದೀರಿ ಹೇಳುತ್ತಿರಾ? ಜಿಲ್ಲೆಯಲ್ಲಿ 6 ಜನ ಶಾಸಕರು ಅದರಲ್ಲೂ ಇಬ್ಬರು ಮಂತ್ರಿಗಳು ಇದ್ದರೂ ಜನ ಸೇರುತ್ತಿಲ್ಲ. ಪ್ರಚಾರಕ್ಕೆ ಹಣ ಕೊಟ್ಟು ಜನರನ್ನು ಕರೆದುಕೊಂಡು ಬರುತ್ತಿದ್ದಿರಿ ನಿಮಗೆ ನಾಚಿಕೆಯಾಗುವುದಿಲ್ಲವೇ? ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟಿಲ್ಲ. ಎಲ್ಲರೂ ಪಕ್ಷದ ಹೈಕಮಾಂಡ್ ಮೆಚ್ಚಿಸಲು ಒಂದಾಗಿರುವಂತೆ ನಾಟಕ ಮಾಡುತ್ತಿದ್ದಿರಿ ಎಲ್ಲವೂ ಜನ ಅರಿತುಕೊಂಡಿದ್ದಾರೆ. ನಿಮ್ಮ ಸುಳ್ಳು ಮಾತಿಗೆ ಯಾರು ಬೆಲೆ ಕೊಡುವುದಿಲ್ಲ. ಮತ್ತೋಮ್ಮೆ ಜಿಗಜಿಣಗಿ ಗೆಲುವು ನಿಶ್ಚಿತ ಎಂದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ನಮ್ಮ ಪಕ್ಷದ ಶಾಸಕರು ಜಿಗಜಿಣಗಿ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಅವರ ಮೇಲು ಇದೆ. ನಾವು ಅವರು ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಬಿಜೆಪಿ ಗೆಲ್ಲಿಸುತ್ತೇವೆ. ಅಭಿವೃದ್ಧಿ ವಿಷಯದಲ್ಲಿ `ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂದು ಯತ್ನಾಳ ಹೇಳಿದ್ದಾರೆ. ಮುಸ್ಲಿಂ ವಿರೋಧಿಯಾಗಿ ಹೇಳಿಕೆ ಕೊಟ್ಟಿಲ್ಲ. ಅದು ನನ್ನ ಗಮನಕ್ಕೂ ಬಂದಿಲ್ಲ. ಜಿಗಜಿಣಗಿ ಅವರು ಮತ ನೀಡುವಂತೆ ಎಲ್ಲರಿಗೂ ಮನವಿ ಮಾಡಿದ್ದಾರೆ ಅವರೂ ಸಹಿತ ಎಲ್ಲಿಯೂ ಅಲ್ಪಸಂಖ್ಯಾತ ಮತಗಳು ಬೇಡ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ವೈದ್ಯ ರಾಜೇಂದ್ರ ನಾಯಕ ಅವರು ಬಾಗಲಕೋಟೆಯವರು. ಸ್ವಾರ್ಥಕ್ಕಾಗಿ ಚುನಾವಣೆ ಸ್ಪರ್ಧೆ ಮಾಡಲು ಬಾಗಲಕೋಟದಿಂದ ವಿಜಯಪುರಕ್ಕೆ ಬಂದಿದ್ದರು. ಮೂಲತಃ ಅವರು ಕಾಂಗ್ರೆಸ್ ಪಕ್ಷದವರೇ ಆಗಿರಬೇಕು. ನಮ್ಮ ಪಕ್ಷದಲ್ಲಿ ಅವರು ಇರಲಿಲ್ಲ. ಬಿಜೆಪಿ ಟಿಕೆಟ್ ಸಿಗದೇ ಇದ್ದಾಗ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಇದರಲ್ಲಿ ಏನು ವಿಶೇಷ ಇಲ್ಲ ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ರಾಹುಲ್ ಜಾಧವ, ಭೀಮಾಶಂಕರ್ ಹದನೂರ, ಕೃಷ್ಣ ಗುನ್ನಾಳ್ಕರ್, ಗೋಪಾಲ ಘಟಕಾಂಬಳೆ, ವಿಜಯ ಜ್ಯೋಶಿ ಉಪಸ್ಥಿತರಿದ್ದರು.

Latest Indian news

Popular Stories