ವಿಜಯಪುರ ಲೋಕಸಭಾ ಕ್ಷೇತ್ರ: 9 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ

ವಿಜಯಪುರ: ಲೋಕಸಭಾ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ ವಿಜಯಪುರ ಪರಿಶಿಷ್ಟ ಜಾತಿ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಏ.19ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು , ಕೊನೆಯ ದಿನವಾದ ಶುಕ್ರವಾರದ ವರೆಗೆ ಒಟ್ಟು 21 ಅಭ್ಯರ್ಥಿಗಳಿಂದ 35 ನಾಮಪತ್ರಗಳು ಸಲ್ಲಿಕೆಯಾಗಿವೆ.
ಶನಿವಾರ ಏ.20 ರಂದು ಈ ಎಲ್ಲ ನಾಮಪತ್ರಗಳ ಪರೀಶೀಲನೆ ನಡೆದಿದ್ದು, ಪರಿಶೀಲನೆಯ ನಂತರ ಒಟ್ಟು 21 ಅಭ್ಯರ್ಥಿಗಳಲ್ಲಿ 12 ಅಭ್ಯರ್ಥಿಗಳ ನಾಮಪತ್ರಗಳು ಸ್ವೀಕೃತಗೊಂಡು 9 ತಿರಸ್ಕೃತಗೊಂಡಿರುತ್ತವೆ ಹಾಗೂ ಕ್ರಮಬದ್ಧವಾಗಿ ಸ್ವೀಕೃತಗೊಂಡ 12 ನಾಮಪತ್ರಗಳ ಪೈಕಿ 2 ಮಹಿಳಾ ಅಭ್ಯರ್ಥಿಗಳಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ‌ ಹಾಗೂ ಜಿಲ್ಲಾಧಿಕಾರಿಯಾಗಿರುವ ಟಿ.ಭೂಬಾಲನ್ ಮಾಹಿತಿ ನೀಡಿದ್ದಾರೆ.

ಸ್ವೀಕಾರವಾಗಿರುವ ನಾಮಪತ್ರ ಕ್ರಮಬದ್ಧವಾಗಿರುವ ಇರುವ ಅಭ್ಯರ್ಥಿಗಳ ವಿವರ:
ಮಲ್ಲು ಹಾದಿಮನಿ (ಬಹುಜನ ಸಮಾಜ ಪಕ್ಷ), ರಮೇಶ ಜಿಗಜಿಣಗಿ (ಭಾರತೀಯ ಜನತಾ ಪಕ್ಷದ) ಹಣಮಂತರಾವ ಆಲಗೂರ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷ), ಕುಲಪ್ಪ ಭೀ ಚವ್ಹಾಣ (ಭಾರತೀಯ ಜವಾನ್ ಕಿಸಾನ ಪಕ್ಷ), ಗಣಪತಿ ಲಾ ರಾಠೋಡ (ಕರ್ನಾಟಕ ರಾಷ್ಟ್ರ ಸಮಿತಿ), ಜೀತೆಂದ್ರ ಅಶೋಕ ಕಾಂಬಳೆ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, (ಎ)), ನಾಗಜ್ಯೋತಿ ಬಿ.ಎನ್ (ಸೋಶಿಯಲಿಸ್ಟ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್), ರಾಜಕುಮಾರ ಅಪ್ಪಣ್ಣ ಹೊನ್ನಕಟ್ಟಿ (ರಾಷ್ಟ್ರೀಯ ಸಮಾಜ ಪಕ್ಷ), ರಾಮಜಿ ಹರಿಜನ ಉರ್ಫ ಬುಧ್ಧಪ್ರೀಯ (ನಕಿ ಭಾರತೀಯ ಏಕತಾ ಪಾರ್ಟಿ), ತಾರಾಬಾಯಿ ಭೋವಿ (ಪಕ್ಷೇತರ), ಬಾಬು ರಾಜೇಂದ್ರ ನಾಯಕ (ಪಕ್ಷೇತರ), ಸಂಗಪ್ಪ ಹುಣಶಿಕಟ್ಟಿ (ಪಕ್ಷೇತರ).

ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಏ.22 ಕೊನೆಯ ದಿನವಾಗಿದ್ದು, ಮೇ.7 ರಂದು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆ ವರೆಗೆ ಮತದಾನ ಮತ್ತು ಜೂ.4 ಮತ ಎಣಿಕೆ ಪ್ರಕ್ರಿಯೆಗಳು ಜರುಗಲಿವೆ.

Latest Indian news

Popular Stories