ಅಂಬಾನಿ, ಜುಕರ್‌ಬರ್ಗ್ ಬಿಗ್ ಡೀಲ್‌: ಚೆನ್ನೈನ ರಿಲಯನ್ಸ್‌ ಕ್ಯಾಂಪಸ್‌ ಆವರಣದಲ್ಲಿ ತಲೆ ಎತ್ತಲಿದೆ ಬಿಗ್ ಪ್ರಾಜೆಕ್ಟ್‌

ಜಾಮ್‌ನಗರದಲ್ಲಿ ಕಳೆದ ತಿಂಗಳು ದೇಶದ ಶ್ರೀಮಂತ ಉದ್ಯಮಿ ಮುಕೇಶ್‌ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ವಿವಾಹ ಪೂರ್ವ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ವಿಶ್ವದ ಪ್ರಸಿದ್ಧ ವ್ಯಕ್ತಿಗಳು ಹಾಜರಿದ್ದರು. ಈ ವೇಳೆ ಜುಕರ್‌ಬರ್ಗ್‌ನಲ್ಲಿ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಆಗ ಎಲ್ಲ ಕ್ಯಾಮೆರಾಗಳು ಅವರ ಮೇಲೆ ಇದ್ದವು. ಈಗ ಇದಕ್ಕಿಂತ ದೊಡ್ಡ ಸುದ್ದಿಯೊಂದು ಬಂದಿದೆ.

ಮಾರ್ಚ್‌ನಲ್ಲಿ ಜಾಮ್‌ನಗರದಲ್ಲಿ ನಡೆದ ಅನಂತ್ ಅಂಬಾನಿ ಅವರ ವಿವಾಹಪೂರ್ವ ಸಮಾರಂಭದಲ್ಲಿ ಮೆಟಾದ ಸಹ-ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಭಾಗವಹಿಸಿದ್ದರು ಎಂದು ಹೇಳಲಾಗುತ್ತಿದೆ. ಈ ವೇಳೆ ಅವರು ರಿಲಯನ್ಸ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದರು. ಒಪ್ಪಂದದ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಬಂದಿಲ್ಲ.

ಪ್ರಸ್ತುತ, ಮೆಟಾ ಉತ್ಪನ್ನಗಳ ಭಾರತೀಯ ಬಳಕೆದಾರರ ಡೇಟಾವನ್ನು ಸಿಂಗಾಪುರದಲ್ಲಿರುವ ಡೇಟಾ ಸೆಂಟರ್‌ಗೆ ಕಳುಹಿಸಲಾಗುತ್ತದೆ. ವರದಿಗಳ ಪ್ರಕಾರ, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ನ ಮೂಲ ಕಂಪನಿ ಮೆಟಾ ಭಾರತದಲ್ಲಿ ತನ್ನ ಮೊದಲ ಡೇಟಾ ಸೆಂಟರ್ ಅನ್ನು ಚೆನ್ನೈನಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್ ಕ್ಯಾಂಪಸ್‌ನಲ್ಲಿ ಸ್ಥಾಪಿಸುವ ಸಾಧ್ಯತೆ ಇದೆ.

ಚೆನ್ನೈನಲ್ಲಿ ರಿಲಯನ್ಸ್‌ ಕಂಪನಿಯ ಕ್ಯಾಂಪಸ್‌ ಸುಮಾರು 10 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಈ ಕ್ಯಾಂಪಸ್‌ನಲ್ಲಿ 100 ಮೇಗಾ ವ್ಯಾಟ್‌ ಐಟಿ ಲೋಡ್‌ ಸಾಮರ್ಥ್ಯವನ್ನು ಹೊಂದಿದೆ. ಈ ಕ್ಯಾಂಪಸ್‌ ಬ್ರೂಕ್‌ಫೀಲ್ಡ್ ಅಸೆಟ್ ಮ್ಯಾನೇಜ್‌ಮೆಂಟ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಡಿಜಿಟಲ್ ರಿಯಾಲ್ಟಿಯ ಜಂಟಿ ಕ್ಯಾಂಪಸ್ ಆಗಿದೆ. ಈ ಕ್ಯಾಂಪಸ್‌ನಲ್ಲಿ ಮೆಟಾ ಕಂಪನಿ 500 ರಿಂದ 1200 ಕೋಟಿ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು ಎಂದು ವರದಿಯಿಂದ ತಿಳಿದು ಬಂದಿದೆ.

Latest Indian news

Popular Stories