ಅಸುನೀಗಿದೆ ಎಂದು ಭಾವಿಸಿದ ಹಸುಳೆಗೆ ಮತ್ತೆ ಜೀವಕಳೆ

ಬಾಗಲಕೋಟೆ: ಅನಾರೋಗ್ಯದಲ್ಲಿದ್ದ ಮಗು ಕೋಮಾ ಸ್ಥಿತಿಗೆ ತಲುಪಿ ಅಸುನೀಗಿದೆ ಎಂಬ ಊಹೆ ಹೆತ್ತವರನ್ನು ಆಘಾತಕ್ಕೆ ತಳ್ಳಿತ್ತು. ಕಣ್ಮುಂದೆಯೇ ಕರುಳ ಕುಡಿ ಅಸುನೀಗಿರುವ ನೋವು ಹೆತ್ತವರಿಗೆ ಕಾಡುತ್ತಿತ್ತು. ಈ ನೋವಿನ ಕಂಬನಿ ಆ ದೇವರಿಗೆ ಕೇಳಿಸಿತೋ ಏನೋ ಪವಾಡ ಎಂಬಂತೆ ಆ ಮಗು ಮತ್ತೆ ಜೀವಂತ..

ಈ ರೀತಿಯ ವೈದ್ಯಕೀಯ ಲೋಕವೂ ಅಚ್ಚರಿ ಪಡುವ ವಿಸ್ಮಯ ನಡೆದದ್ದು ಬಾಗಲಕೋಟ ಜಿಲ್ಲೆಯ ಇಲಕಲ್ ನಲ್ಲಿ.
ದ್ಯಾಮಣ್ಣ ಭಜಂತ್ರಿ ಎಂಬ ಒಂದು ವರ್ಷದ ಮಗು ಪವಾಡ ಸದೃಶ್ಯ ರೀತಿಯಲ್ಲಿ ಮರು ಜೀವ ಪಡೆದಿದೆ.

ಅನಾರೋಗ್ಯದಿಂದ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿನ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿತ್ತು, ಒಂದು ಹಂತಕ್ಕೆ ವೈದ್ಯರು ಸಹ ಮನೆಗೆ ಕರೆದುಕೊಂಡು ಹೋಗುವಂತೆ ವೈದ್ಯರ ಸಲಹೆ ನೀಡಿದರು. ಕೋಮಾ ಹಂತಕ್ಕೂ ಮಗು ಜಾರಿತು. ಹೀಗಾಗಿ ನೊಂದ ಹೆತ್ತವರು, ಸಂಬಂಧಿಕರು ಮಗುವನ್ನು ಕರೆದುಕೊಂಡು ಇಲಕಲ್ ಪ್ರಯಾಣ ಬೆಳೆಸಿದ್ದರು.
ಮಾರ್ಗ ಮದ್ಯೆ ಮಗುವಿನ ಚಲನವಲನ ಕಾಣದೇ ಮಗು ಮೃತಪಟ್ಟಿದೆ ಎಂಬುದು ಖಾತ್ರಿಯಾಗಿ ಆಕ್ರಂದನ ಮುಗಿಲು ಮುಟ್ಟಿತ್ತು. ಮಗು ಮೃತಪಟ್ಟಿದೆ ಎಂದು ತಿಳಿದು ಬಾಗಲಕೋಟೆ ಖಾಸಗಿ ಆಸ್ಪತ್ರೆಯಿಂದ ಇಲಕಲ್ ನಗರದ ಆಸ್ಪತ್ರೆಗೆ ಧಾವಿಸಲು ಮುಂದಾದರು.
ಈ ವೇಳೆಯಲ್ಲಿ ಏಕಾಏಕಿ ಕೆಮ್ಮಿದ ಮಗು ಪವಾಡ ಸದೃಶ್ಯವಾಗಿ ಬದುಕುಳಿದ ಮಗು ಮರುಜೀವ ಪಡೆದ ಪ್ರಹಸನ ನಡೆಯಿತು.
ಆಸ್ಪತ್ರೆಯಿಂದ ಗ್ರಾಮಕ್ಕೆ ಕೊಂಡೊಯ್ಯುವಾಗ ಕೆಮ್ಮುತ್ತಾ ಎಚ್ಚೆತ್ತ ಮಗು ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ.

ಮಗು ಮರುಜೀವ ಪಡೆದ ಘಟನೆಯಿಂದ ಹೆತ್ತವರಲ್ಲಿ ಸಂತಸ ಮನೆ ಮಾಡಿ ಸಮೀಪದಲ್ಲಿಯೇ ಇದ್ದ ಇಲಕಲ್ ಹಜರತ್ ಮುರ್ತುಜಾ ಖಾದ್ರಿ ದರ್ಗಾಕ್ಕೆ ತೆರಳಿ, ದರ್ಶನ ಪಡೆದುಕೊಂಡರು. ತಕ್ಷಣ ಇಲಕಲ್ ಖಾಸಗಿ ಆಸ್ಪತ್ರೆಗೆ ಮಗು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Latest Indian news

Popular Stories