
bellary
ಅನಾಮಧೇಯ ಶವ ಪತ್ತೆ: ಪ್ರಕರಣ ದಾಖಲು ಹೊಸಪೇಟೆ Dead man
ಹೊಸಪೇಟೆ (ವಿಜಯನಗರ), ಏ.23(ಕರ್ನಾಟಕ ವಾರ್ತೆ): Dead man ಹೊಸಪೇಟೆ ನಗರದಲ್ಲಿ ಅಂದಾಜು 40-45 ವಯಸ್ಸಿನ ಗಂಡಸಿನ ಶವ ಪತ್ತೆಯಾಗಿರುವ ಕುರಿತು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಸಹಾಯಕ ಸಬ್ ಇನ್ಸ್‍ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೃತ ವ್ಯಕ್ತಿಯ ಚಹರೆ ಗುರುತು: 5.6ಅಡಿ ಎತ್ತರ, ಕಪ್ಪು ಮೈಬಣ್ಣ, ತೆಳುವಾದ ಮೈಕಟ್ಟು, ತಲೆಯಲ್ಲಿ 2 ಇಂಚಿನ ಕಪ್ಪು ಕೂದಲು, ಗಡ್ಡ ಮೀಸೆ ಬಿಟ್ಟಿರುತ್ತಾನೆ, ಮಾಸಿದ ಬಿಳಿ ಗೀರುಗಳಿರುವ ನೀಲಿ ಬಣ್ಣದ ಅರ್ಧ ತೋಳಿನ ಅಂಗಿ, ಮಾಸಿದ ಕಪ್ಪು ಬಣ್ಣದ ಕಾರ್ಟನ್ ಪ್ಯಾಂಟ್ ಧರಿಸಿರುತ್ತಾರೆ.
ಮೃತನ ವಾರಸುದಾರರ ಮಾಹಿತಿ ಅಥವಾ ಸುಳಿವು ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ : 100 ಅಥವಾ ಪಿ.ಐ.ಪಟ್ಟಣ ಪೊಲೀಸ್ ಠಾಣೆ, ಹೊಸಪೇಟೆ:08394-224033/9480803070, ಡಿ.ಎಸ್.ಪಿ. ಹೊಸಪೇಟೆ:08394-224204, ಎಸ್.ಪಿ.ಬಳ್ಳಾರಿ:08392-258100 ಗೆ ಸಂಪರ್ಕಿಸಲು ಅವರು ತಿಳಿಸಿದ್ದಾರೆ.




