Crime

ಕುರುಬ ಸಮುದಾಯ ಎಸ್.ಟಿಗೆ ಸೇರ್ಪಡೆ ವಿಚಾರ: ಅ 11 ರಂದು ಮಹತ್ವದ ಸಭೆ : ಕಾಗಿನೆಲೆ ಸ್ವಾಮೀಜಿ

ಬೆಂಗಳೂರು, ಅ 6(ಯುಎನ್‍ಐ):- ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಕುರುಬ ಸಮುದಾಯದ ಮುಖಂಡರು ಮತ್ತು ಜನ ಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸಲು ಅಕ್ಟೋಬರ್ 11ರಂದು ಮಹತ್ವದ ಸಭೆ ಕರೆಯಲಾಗಿದೆ. ಕನಕಪೀಠ ಕಾಗಿನೆಲೆ ಪ್ರಸನ್ನಾನಂದಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುರುಬ ಸಮಾಜ ಬೀದರ್ ಯಾದಗಿರಿ ಹಾಗೂ ಕಲಬುರ್ಗಿಜಿಲ್ಲೆಯಿಂದ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಕೊಡಗು ಕುರುಬರ ಸಂಘದಬೇಡಿಕೆ ವಾಪಸ್ ಬಂದಿದೆ. ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ಕುರಿತು ಅಕ್ಟೋಬರ್ 11 ರಂದು ಸಂಸದರು,ಶಾಸಕರು ಸೇರಿದಂತೆ ಜನಪ್ರತಿನಿಧಿಗಳ ಸಭೆ ಕರೆಯಲಾಗಿದೆ.ಅಂದಿನ ಸಭೆಯಲ್ಲಿ ಅಭಿಪ್ರಾಯ ಪಡೆದು ಹೋರಾಟ ನಡೆಸಲಾಗುವುದು ಎಂದರು.ಈಗಾಗಲೇ ಎಸ್ಟಿ ಸಮುದಾಯದವರು ಮೀಸಲಾತಿಯನ್ನು 3.ರಿಂದ 7.5 ಕ್ಕೆ ಹೆಚ್ಚಿಸುವಂತೆ ಕೇಳಿದ್ದು, ಅವರಿಗೆ ಪೂರಕವಾಗಿ ನಾವಿದ್ದೇವೆ.ಈಗಿರುವ ಹಿಂದುಳಿದ ವರ್ಗದಲ್ಲಿರುವ ನಮ್ಮ ಭಾಗವನ್ನು ತೆಗೆದುಕೊಂಡು ಎಸ್ಟಿ ಗೆ ಸೇರಿಸಲು ಪ್ರಯತ್ನ ಮಾಡುತ್ತೇವೆ ಎಂದರು.ಕುರುಬ ಸಮುದಾಯದ ಮುಖಂಡ ಮುಕುಡಪ್ಪ ಮಾತನಾಡಿ, 1868 ರಲ್ಲಿಯೇ ಕುರುಬ ಸಮಾಜ ಬುಡಕಟ್ಟು ಸಮುದಾಯ ಎಂದು ಬ್ರಿಟಿಷ್ಸರ್ಕಾರ ಘೋಷಣೆ ಮಾಡಿತ್ತು. ದೇವರಾಜ್ ಅರಸು ಅವರು 1976 ಎಸ್ ಸಿ ಗೆ ಸೇರಿಸಲಿಲ್ಲ. ಕೊರಚ, ಕೊರಮ, ಭೋವಿ, ಲಂಬಾಣಿ ಮಾತ್ರಎಸ್ಸಿ ಗೆ ಸೇರಿಸಲಾಯಿತು. ರಾಜ್ಯದಲ್ಲಿ ಐದು ಆಯೋಗಗಳು ಕುರುಬ ಸಮಾಜ ಹಿಂದುಳಿದಿದೆ ಎಂದು ವರದಿ ನೀಡಿದೆ. ರಾಮಕೃಷ್ಣ ಹೆಗಡೆ ಕಾಲದಲ್ಲಿ ವಾಲ್ಮೀಕಿ ಮತ್ತು ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಿಸಲು ಆದೇಶ ಮಾಡಿದರು. ಆದರೆ ಕುರುಬರು ಎಸ್.ಟಿಗೆ ಸೇರ್ಪಡೆಯಾಗಲಿಲ್ಲ. ಈಗ ಮತ್ತೆ ಹಿಂದೆ ಆಗಿರುವ ತಪ್ಪನ್ನು ಸರಿಪಡಿಸಲು ಎಲ್ಲರೂ ಒಟ್ಟಾಗಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆಎಂದರು.ಎಚ್. ಎಂ. ರೇವಣ್ಣ ಮಾತನಾಡಿ, ಸ್ವಾತಂತ್ರ್ಯ ಪೂರ್ವದಿಂದ ಕುರುಬ ಸಮುದಾಯ ಎಸ್ಟಿಯಲ್ಲಿತ್ತು. ತಮ್ಮ ರಾಜಕೀಯ ಶಕ್ತಿಯ ಕೊರತೆಯಿಂದಅದನ್ನು ಪಡೆಯಲು ಆಗುತ್ತಿಲ್ಲ. ಗೊಂಡ ಮತ್ತು ರಾಜಗೊಂಡ ಸಮುದಾಯಗಳಿಗೆ ತೊಂದರೆಯಾಗಿದ್ದರಿಂದ ಅವರಿಗೆ ಎಸ್ಟಿ ಮೀಸಲಾತಿಕೊಡಿಸಲು ಸಿದ್ದರಾಮಯ್ಯ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರು. ಎಂಟು ಕುರುಬ ಸಮುದಾಯದ ಉಪ ಜಾತಿಗಳನ್ನು ಒಟ್ಟಾಗಿ ಸೇರಿಸಿ ಎಸ್ಟಿ ಗೆಸೇರಿಸಲು ಪ್ರಯತ್ನ ನಡೆಸಲಾಗುತ್ತಿದೆ. ಇದು ಹೊಸ ಬೇಡಿಕೆಯಲ್ಲ. ನಾವು ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದ್ದೇವೆ. ಆಡಳಿತಸರ್ಕಾರ ನಮ್ಮ ಬೇಡಿಕೆಯನ್ನು ಪರಿಗಣಿಸಬೇಕು ಎಂದರು.ನಮ್ಮ ಹೋರಾಟಕ್ಕೆ ಸಿದ್ದರಾಮಯ್ಯ ಅವರನ್ನು ಕರೆಯುತ್ತೇವೆ. ಯಾವುದೇ ಗೊಂದಲವಿಲ್ಲ. ರಾಜಕೀಯ ಸ್ಥಿತ್ಯಂತರ ಇದ್ದೇ ಇರುತ್ತದೆ. ಅದುನಿಲ್ಲುವುದಿಲ್ಲ. ಈ ಸರ್ಕಾರ ಮುಂದುವರೆದು ಸಮುದಾಯಕ್ಕೆ ಶೇ 10 ರಷ್ಟು ಮೀಸಲಾತಿ ನೀಡಿದಾಗ ಯಾವುದೇ ಕುಲ ಶಾಸ್ತ್ರೀಯ ಅಧ್ಯಯನನಡೆಸಿಲ್ಲ. ಈಗಾಗಲೇ ಕುರುಬ ಸಮುದಾಯ ಎಸ್ಟಿಯಲ್ಲಿದೆ. ಅದಕ್ಕೆ ಕುಲಶಾಸ್ತ್ರೀಯ ಅಧ್ಯಯನ ಅಗತ್ಯವಿಲ್ಲ ಎಂದರು.ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಲು ಎಲ್ಲರೂ ಒಟ್ಟಾಗಿ ಸೇರಿದ್ದೇವೆ.ನಮ್ಮ ಜೊತೆಗೆ ಕೋಲಿ ಸಮುದಾಯ, ಕಾಡುಗೊಲ್ಲರು, ಸವಿತಾ ಸಮುದಾಯದವರು ಪರಿಶಿಷ್ಟ ಪಂಗಕ್ಕೆ ಸೇರ್ಪಡೆಯಾಗಲು ನಮ್ಮನ್ನು ಸೇರಿಸಿಕೊಳ್ಳುವಂತೆ ಸೇರಿಸಲು ಜೊತೆ ಸೆರಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಅರ್ಹರು ಯಾರೇ ಬಂದರೂ ಸೇರಿಸಿಕೊಳ್ಳುತ್ತೇವೆ. ಇದರಪೂರ್ವ ಬಾವಿ ಯಾಗಿ ಅಕ್ಟೋಬರ್ 11 ರಂದು ಅರಮನೆ ಮೈದಾನದಲ್ಲಿ ಸಮಾಜದ ಎಲ್ಲ ಜನ ಪ್ರತಿನಿಧಿಗಳು ಪಾಲ್ಗೊಂಡು ಚರ್ಚಿಸುತ್ತಿದ್ದೇವೆಎಂದರು.ಈಶ್ವರಾನಂದ ಸ್ವಾಮೀಜಿ ಮಾತನಾಡಿ,ಸಿದ್ದರಾಮಯ್ಯ ಅವರ ಒಪ್ಪಿಗೆ ಪಡೆದುಕೊಂಡೇ ಈ ಹೋರಾಟ ನಡೆಸುತ್ತಿದ್ದೇವೆ. ಇದರಲ್ಲಿ ಯಾವುದೇಗೊಂದಲವಿಲ್ಲ. ಹೋರಾಟಕ್ಕೆ ಅವರ ವಿರೋಧವಿಲ್ಲ. ಅವರ ಒಪ್ಪಿಗೆ ಇದೆ ಎಂದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button