
ರಾಯಚೂರು: ಜಿಲ್ಲೆಯಲ್ಲಿಂದು 88 ಕೋವಿಡ್-19 ದೃಢ, ಒಂದು ಸಾವು
ರಾಯಚೂರು,ಅ.6:- ಜಿಲ್ಲೆಯಲ್ಲಿ ಅ.6ರ ಮಂಗಳವಾರ ಕೋವಿಡ್-19ನ 88 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ. ಇದೂವರೆಗೆ 12,094 ಮಂದಿಗೆ ಕೊರೋನಾ ಸೋಂಕು ವರದಿಯಾಗಿದ್ದು, ಇಂದು 141 ಜನರು ಸೇರಿದಂತೆ ಇದೂವರೆಗೆ ಒಟ್ಟಾರೆ 10,515 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಹಾಗೂ ಓರ್ವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ದೇವದುರ್ಗ ತಾಲೂಕಿನಿಂದ 166, ಲಿಂಗಸೂಗೂರು ತಾಲೂಕಿನಿಂದ 152, ಮಾನ್ವಿ ತಾಲೂಕಿನಿಂದ 171, ಸಿಂಧನೂರು ತಾಲೂಕಿನಿಂದ 190 ಮತ್ತು ರಾಯಚೂರು ತಾಲೂಕಿನಿಂದ 231 ಸೇರಿದಂತೆ ಒಟ್ಟು 910 ಜನರ ಮಾದರಿಯನ್ನು ಕೋವಿಡ್-19 ಶಂಕೆ ಹಿನ್ನಲೆಯಲ್ಲಿ ವರದಿಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಕೋವಿಡ್-19 ಪರೀಕ್ಷೆಗಾಗಿ ಕಳುಹಿಸಲಾಗಿದ್ದ ಫಲಿತಾಂಶಗಳಲ್ಲಿ ಇಂದು ಬಂದ ವರದಿಗಳಲ್ಲಿ 2,149 ನೆಗೆಟಿವ್ ಆಗಿವೆ. ಒಟ್ಟಾರೆ ಜಿಲ್ಲೆಯಿಂದ ಇದೂವರೆಗೆ 1,26,820 ಜನರ ಮಾದರಿಯನ್ನು ಕೊರೋನಾ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಅವುಗಳಲ್ಲಿ 1,12,321 ವರದಿಗಳು ನೆಗೆಟಿವ್ ಆಗಿವೆ. ಉಳಿದ 1,495 ಸ್ಯಾಂಪಲ್ಗಳ ಫಲಿತಾಂಶ ಬರಬೇಕಿದೆ. ಫಿವರ್ ಕ್ಲಿನಿಕ್ಗಳಲ್ಲಿಂದು 671 ಜನರನ್ನು ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಿಸಲಾಗಿದೆ.
ರಾಯಚೂರು ತಾಲೂಕಿನ ಸಾಂಸ್ಥಿಕ ಕ್ವಾರೆಂಟೈನ್ನಲ್ಲಿ 21, ಸಿಂಧನೂರು ತಾಲೂಕು ಸಾಂಸ್ಥಿಕ ಕ್ವಾರೆಂಟೈನ್ನಲ್ಲಿ 13, ಲಿಂಗಸೂಗೂರು ತಾಲೂಕು ಸಾಂಸ್ಥಿಕ ಕ್ವಾರೆಂಟೈನ್ನಲ್ಲಿ 12 ಹಾಗೂ ದೇವದುರ್ಗ ತಾಲೂಕು ಸಾಂಸ್ಥಿಕ ಕ್ವಾರೆಂಟೈನ್ನಲ್ಲಿ 10 ಜನರನ್ನು ಸಾಂಸ್ಥಿಕ ಕ್ವಾರೆಂಟೈನ್ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.




