Crime

ಇರಾನ್ ವಿರುದ್ಧ ಕಾರ್ಯಾಚರಣೆಗೆ ತಮ್ಮ ನೆಲ ನೀಡುವುದಿಲ್ಲ ಎಂದ ಅರಬ್ ರಾಷ್ಟ್ರಗಳು – ಯುಎಸ್’ಗೆ ಹಿನ್ನಡೆ!

ಮಧ್ಯಪ್ರಾಚ್ಯದಲ್ಲಿ ಅಮೇರಿಕಾದ ಹಿತಾಸಕ್ತಿಗಳಿಗೆ ಗಮನಾರ್ಹ ಹಿನ್ನಡೆಯಾಗಿದೆ.

ಅಮೆರಿಕನ್ ಪಡೆಗಳನ್ನು ಸ್ಥಾಪಿಸುವ ಉದ್ದೇಶವನ್ನು ತಿರಸ್ಕರಿಸಿದ್ದು ಇರಾನ್ ವಿರೋಧಿ ಕಾರ್ಯಾಚರಣೆಗಳ ಯೋಜನೆಗಳನ್ನು ಸಾಧಿಸಲು ಸಹಾಯ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿರುವ ಕುರಿತು ವರದಿಯಾಗಿದೆ. ಸೌದಿ ಅರೇಬಿಯಾದ ಈ ನಿರ್ಧಾರದಿಂದ ಯುಎಸ್’ಗೆ ಭಾರಿ ಹಿನ್ನಡೆಯಾಗಿದೆ. ಈ ಬೆಳವಣಿಗೆ ಬಹಳಷ್ಟು ಕುತೂಹಲವನ್ನು ನಿರ್ಮಿಸಿದೆ.

ಈ ಮುಂಚೆ ಇರಾಕ್ ನೆಲವನ್ನು ಇರಾನನ್ನು ಗುರಿಯಾಗಿಸಲು ಲಾಂಚಿಂಗ್ ಪ್ಯಾಡ್ ಆಗಿ ಬಳಸಲು ಯುಎಸ್-ಇಸ್ರೇಲದ ನಿರ್ಧರಿಸಿತ್ತು. ಇದನ್ನು ಇರಾನ್ ಖಂಡಿಸಿತ್ತು.ಇನ್ನು ಇರಾನ್ ಮೇಲೆ ದಾಳಿಯು ಯುಎಸ್ ಅಥವಾ ಅಮೇರಿಕಾ ಬೆಂಬಲಿತ ಅರಬ್ ರಾಷ್ಟ್ರಗಳ ಇಂಧನ ಸ್ಟೇಷನ್ ಗಳ ಮೇಲಿ ದಾಳಿಗೆ ಕಾರಣವಾಗಬಹುದು ಎಂಬ ಎಚ್ಚರಿಕೆ ನೀಡಿತ್ತು.

ಇದೀಗ ಇರಾನ್ ಅಣು ಬಾಂಬ್ ಪರೀಕ್ಷೆ ನಡೆಸಿರುವ ಸಂಶಯ ವ್ಯಕ್ತವಾಗಿದ್ದು ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.

 

 

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button