
ಪದವಿ ಮತ್ತು ಸ್ನಾತಕ ಪದವಿ ತರಗತಿಗಳಲ್ಲಿ ಎನ್ಸಿಸಿ ಇನ್ನು ಐಚ್ಛಿಕ ವಿಷಯ
ಮಡಿಕೇರಿ: ಎನ್ಸಿಸಿ (ರಾಷ್ಟಿçÃಯ ಕೆಡೆಟ್ ಕಾರ್ಪ್ಸ್) ಯನ್ನು ದೇಶದ ವಿಶ್ವವಿದ್ಯಾಲಯಗಳ ಪದವಿ ಮತ್ತು ಸ್ನಾತಕ ಪದವಿ ತರಗತಿಗಳಲ್ಲಿ ಐಚ್ಛಿಕ ವಿಷಯವನ್ನಾಗಿ ಸೇರಿಸಬೇಕು ಎಂದು ಎನ್ಸಿಸಿಯ ಮಹಾನಿರ್ದೇಶಕರು ಮನವಿ ಸಲ್ಲಿಸಿದ ಹಿನ್ನೆಲೆ ಯುಜಿಸಿ ಎಲ್ಲಾ ವಿಶ್ವವಿದ್ಯಾಲಯಗಳ ಉಪಕುಲಪತಿಗಳಿಗೆ ಇದೇ ಏ.೧೫ರಂದು ಮಾರ್ಗಸೂಚಿ ಹೊರಡಿಸಿದೆ.
ಇದರನ್ವಯ ಎನ್ಸಿಸಿಯನ್ನು ಜನರಲ್ ಎಲೆಕ್ಟಿವ್ ಕ್ರೆಡಿಟ್ ಕೋರ್ಸ್ (ಜಿಇಸಿಸಿ) ಎಂದು ಪರಿಚಯಿಸಲಾಗುತ್ತಿದೆ. ಕರ್ನಾಟಕ ಮತ್ತು ಗೋವಾ ರಾಜ್ಯಗಳಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಎನ್ಸಿಸಿಯನ್ನು ಚುನಾಯಿತ ವಿಷಯವಾಗಿ ಶೀಘ್ರವಾಗಿ ಅನುಷ್ಠಾನಗೊಳಿಸಲು ಸಮಗ್ರ ಪ್ರಯತ್ನಗಳನ್ನು ಪ್ರಾರಂಭಿಸಲಾಗಿದೆ ಎಂದು ಎನ್ಸಿಸಿಯ ೧೯ ಕರ್ನಾಟಕ ಬೆಟಾಲಿಯನ್ ನ ಮಡಿಕೇರಿ ವಿಭಾಗದ ಕಮಾಂಡಿAಗ್ ಆಫೀಸರ್ ಕರ್ನಲ್ ಚೇತನ್ ಧಿಮಾನ್ ತಿಳಿಸಿದ್ದಾರೆ.
ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಎನ್ಸಿಸಿ ನಿರ್ದೇಶನಾಲಯಗಳ ರಾಜ್ಯ ಅಧಿಕಾರಿಗಳನ್ನು ಸಂಪರ್ಕಿಸಲು ಉಪಕುಲಪತಿಗಳನ್ನು ಯುಜಿಸಿ ಕೇಳಿದೆ. ಎರಡರಿಂದ ಐದು ವರ್ಷಗಳ ನಿಗದಿತ ತರಬೇತಿ ಪಡೆದು ಪರೀಕ್ಷೆಗಳಿಗೆ ಹಾಜರಾಗುವ ಕೆಡೆಟ್ಗಳಿಗೆ ವಿಶೇಷವಾಗಿ ಬಿ ಮತ್ತು ಸಿ ಪ್ರಮಾಣಪತ್ರ ನೀಡಲಾಗುತ್ತದೆ. ಈ ಪ್ರಮಾಣಪತ್ರಗಳು ಹಲವು ಸೌಲಭ್ಯ ಮತ್ತು ಮೀಸಲಾತಿ ಪಡೆಯಲು ಸಹಕಾರಿಯಾಗಿದೆ. ಉನ್ನತ ಶಿಕ್ಷಣ, ಸರ್ಕಾರಿ ಸಂಸ್ಥೆ ಮತ್ತು ಖಾಸಗಿ ವಲಯದಲ್ಲಿ ಉದ್ಯೋಗ ಪಡೆಯುವಾಗ ಹೆಚ್ಚು ಅನುಕೂಲವನ್ನು ಸೃಷ್ಟಿಸಲಿದೆ.
ವಿದ್ಯಾರ್ಥಿಗಳು ಎನ್ಸಿಸಿ ಯನ್ನು ಕೂಡ ಒಂದು ವಿಷಯವನ್ನಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಕಲಿಕೆಯನ್ನು ಸಮಗ್ರ ಮತ್ತು ಕೌಶಲ್ಯ ಆಧಾರಿತವಾಗಿಸುವುದಲ್ಲದೆ ಅಂತಿಮವಾಗಿ ವೃತ್ತಿಜೀವನದ ಭವಿಷ್ಯವನ್ನು ಸುಗಮಗೊಳಿಸುತ್ತದೆ. ಕೋರ್ಸ್ನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ವಿದ್ಯಾರ್ಥಿಗಳಿಗೆ ಕ್ರೆಡಿಟ್ ಪಾಯಿಂಟ್ ಗಳನ್ನು ನೀಡಲಾಗುತ್ತದೆ. ಇದರಿಂದ ಆಯಾ ಪದವಿಗಳಿಗೆ ಅರ್ಹತೆ ಪಡೆಯಲು ಸಾಧ್ಯವಾಗುತ್ತದೆ. ಬಿ ಮತ್ತು ಸಿ ಪ್ರಮಾಣಪತ್ರಗಳಿಗಾಗಿ ಎನ್ಸಿಸಿ ಪಠ್ಯಕ್ರಮವನ್ನು ಎನ್ಇಪಿ ೨೦೨೦ ರ ಚಾಯ್ಸ್ ಬೇಸ್ಡ್ ಕ್ರೆಡಿಟ್ ಸಿಸ್ಟಮ್ (ಸಿಬಿಸಿಎಸ್) ಪ್ರಕಾರ ವಿನ್ಯಾಸಗೊಳಿಸಲಾಗಿದೆ. ಇದು ೬ ಸೆಮಿಸ್ಟರ್ಗಳನ್ನು ಒಳಗೊಂಡ ೨೪ ಕ್ರೆಡಿಟ್ ಪಾಯಿಂಟ್ಗಳನ್ನು ನೀಡುತ್ತದೆ. ಅದರಲ್ಲಿ ಒಬ್ಬ ವಿದ್ಯಾರ್ಥಿಯು ಮೊದಲ ಎರಡು ಸೆಮಿಸ್ಟರ್ಗಳಲ್ಲಿ ೪ ಕ್ರೆಡಿಟ್ಗಳನ್ನು ಹಾಗೂ ಮೂರನೇ ಮತ್ತು ನಾಲ್ಕನೇ ಸೆಮಿಸ್ಟರ್ ಗಳಲ್ಲಿ ೧೦ ಕ್ರೆಡಿಟ್ಗಳನ್ನು ಪಡೆಯಬಹುದು. ಐದನೇ ಮತ್ತು ಆರನೇ ಸೆಮಿಸ್ಟರ್ನಲ್ಲಿ ಅದೇ ರೀತಿ ಹತ್ತು ಕ್ರೆಡಿಟ್ಗಳನ್ನು ಪಡೆಯಲು ಅವಕಾಶವಿದೆ.
ಮುಂಬರುವ ಶೈಕ್ಷಣ ಕ ಅಧಿವೇಶನದಿಂದ ಉದ್ದೇಶಿತ ಯೋಜನೆ ರೂಪುಗೊಳ್ಳಲಿದ್ದು, ರಾಜ್ಯ ಸರ್ಕಾರಗಳಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗಿದೆ. ಸಂಪೂರ್ಣ ಸಹಕಾರ ದೊರೆತ್ತಲ್ಲಿ ೧೯೪೮ ರಿಂದ ರಾಷ್ಟç ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿದ ಅತಿದೊಡ್ಡ ಸಮವಸ್ತç ಪಡೆ ಎನ್ಸಿಸಿಯ ಘನತೆ ಹೆಚ್ಚಲಿದೆ ಎಂದು ಕರ್ನಲ್ ಚೇತಲ್ ಧಿಮಾನ್ ಅಭಿಪ್ರಾಯಪಟ್ಟಿದ್ದಾರೆ. ಫೋಟೋ ::: ಎನ್ಸಿಸಿ, ಚೇತನ್




