ಅಕ್ರಮ ರೀಫಿಲಿಂಗ್‌ ಮಾಡುವಾಗ ಸಿಲಿಂಡರ್‌ ಸ್ಫೋಟ,ಇಬ್ಬರು ಗಂಭೀರ

ಬೆಂಗಳೂರು :ಅ.24- ಅಕ್ರಮವಾಗಿ ರೀಫಿಲಿಂಗ್‌ ಮಾಡುವಾಗ ಸಿಲಿಂಡರ್‌ ಸ್ಫೋಟಗೊಂಡು ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಕಳೆದ ರಾತ್ರಿ ಸಂಭವಿಸಿದೆ.

ಎಲೆಕ್ಟ್ರಾನಿಕ್‌ ಸಿಟಿಯ ಸೈಯದ್‌ ರೆಯಾನ್‌ ಹಾಗೂ ಸೈಯದ್‌ ಆಯಾನ್‌ ಗೆ ತೀವ್ರವಾಗಿ ಗಾಯಗಳಾಗಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅನ್ವರ್‌ ಎಂಬುವವರ ಮನೆಯನ್ನು ಬಾಡಿಗೆಗೆ ಪಡೆಯಲಾಗಿದ್ದು, ಅಲ್ಲಿ ಗ್ಯಾಸ್‌‍ ರೀಫಿಲ್ಲಿಂಗ್‌ ದಂಧೆ ನಡೆಯುತ್ತಿತ್ತು. ಈ ವೇಳೆ ಅದರ ಮಾಲೀಕ ತಮ ಸಂಬಂಧಿಗಳಾದ ಸೈಯದ್‌ ರೆಯಾನ್‌ ಮತ್ತು ಸೈಯದ್‌ ಆಯಾನ್‌ನನ್ನು ಗ್ಯಾಸ್‌‍ ರೀಫಿಲ್ಲಿಂಗ್‌ ಮಾಡಲು ನಿಯೋಜಿಸಿ ಹೊರಗೆ ಹೋಗಿದ್ದನು.

ಇವರಿಬ್ಬರು ಗ್ಯಾಸ್‌‍ ರೀಫಿಲ್‌ ಮಾಡುವ ವೇಳೆ ಸಿಲಿಂಡರ್‌ ಸ್ಪೋಟಗೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಮುಖ್ಯ ಆರೋಪಿ ತಬರೇಜ್‌ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Latest Indian news

Popular Stories