Featured StoryUdupi

ಅಂಬಲಪಾಡಿ ಜಂಕ್ಷನ್ ನಲ್ಲಿ ಒಳಚರಂಡಿ, ಸರ್ವಿಸ್ ರಸ್ತೆಗಳ ಯೋಜನೆ ಇಲ್ಲದೆ ತರಾತುರಿಯಲ್ಲಿ ಅಂಡರ್ ಪಾಸ್ ನಿರ್ಮಿಸಲು ಹೊರಟಿರುವುದು ಸರಿಯೇ ‌-ರಮೇಶ್ ಕಾಂಚನ್


ಈಗಾಗಲೇ ಕರಾವಳಿ ಭಾಗದ ಕುಂದಾಪುರ,ಕೋಟ, ಬ್ರಹ್ಮಾವರ, ಉಡುಪಿ ಬೈಪಾಸ್ ನಲ್ಲಿ ನಿರ್ಮಿಸಲ್ಪಟ್ಟ ಅಂಡರ್ ಪಾಸ್,ಓವರ್ ಪಾಸ್ ಅವೈಜ್ಞಾನಿಕವಾಗಿದ್ದು, ಉಡುಪಿ ಕರಾವಳಿ ಭಾಗದ ಜನರು ರಾಷ್ಟ್ರೀಯ ಹೆದ್ದಾರಿ ಅಸಮರ್ಪಕ ಕಾಮಗಾರಿಯ ಬಗ್ಗೆ ರೋಸಿ ಹೋಗಿದ್ದಾರೆ.ಅವೈಜ್ಞಾನಿಕ ಕಾಮಗಾರಿಯಿಂದ ಮಳೆಗಾಲದಲ್ಲಿ ಸರ್ವಿಸ್ ರಸ್ತೆಯ ಎರಡು ಭಾಗದಲ್ಲಿ ಮಳೆ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ, ಪಾದಚಾರಿಗಳಿಗೆ ಬಹಳ ತೊಂದರೆಗಳುಂಟಾಗುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಈಗಾಗಲೇ ಮಲ್ಪೆ- ಮೊಣಕಾಳ್ಮೂರು
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಕುಂಠಿತವಾಗಿದ್ದು ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಓಡಾಡುವ ವಾಹನಗಳು ಅಂಬಲಪಾಡಿ -ಕಿದಿಯೂರು ರಸ್ತೆಯಿಂದ ಓಡಾಡುತ್ತಿರುವುದು ಕೂಡ ಗೊತ್ತಿರುವ ವಿಷಯ ಆಗಿದೆ. ಈ ಮಧ್ಯೆ ತರಾತುರಿಯಲ್ಲಿ ರಾತೋರಾತ್ರಿ ಅಂಬಲಪಾಡಿ ಜಂಕ್ಷನ್ ನಲ್ಲಿ ಅಂಡರ್ ಪಾಸ್ ಕಾಮಗಾರಿಯನ್ನು ಸಾರ್ವಜನಿಕರಿಗೆ, ಜನಪ್ರತಿನಿಧಿಗಳಿಗೆ ಯಾವುದೇ ಮಾಹಿತಿಯನ್ನು ನೀಡದೆ, ಕಾಮಗಾರಿಯ ಮಾಹಿತಿ ಫಲಕ ಹಾಕದೆ ಕಾಮಗಾರಿ ಪ್ರಾರಂಭಿಸಿರುವುದು ಬಹಳಷ್ಟು ಗೊಂದಲಕ್ಕೆ ಕಾರಣವಾಗಿದೆ.


ಸಂಚಾರ ವ್ಯವಸ್ಥೆಯ ಸರಿಯಾದ ಯೋಜನೆಗಳಿಲ್ಲದೆ ಒಳಚರಂಡಿ,ಸರ್ವಿಸ್ ರಸ್ತೆಗಳ ವ್ಯವಸ್ಥೆಗಳಿಲ್ಲದೆ ಅಂಡರ್ ಪಾಸ್ ಕಾಮಗಾರಿಯನ್ನು ಪ್ರಾರಂಭಿಸಿದ್ದು ಸರಿಯಾದ ಕ್ರಮವಲ್ಲ ಎಂದು ಹೇಳಿದರು. ಹಾಗೆಯೇ ಸಂಸದರಾದ ಶ್ರೀನಿವಾಸ ಪೂಜಾರಿ ಹಾಗೂ ಶಾಸಕರಾದ ಯಶ್ ಪಾಲ್ ಸುವರ್ಣರವರು ಕೇಂದ್ರ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿಯವರಲ್ಲಿ ಚರ್ಚಿಸಿದಾಗ ಸಮಸ್ಯೆ ಬಗೆಹರಿಸುವ ಬಗ್ಗೆ ಆಶ್ವಾಸನೆ ಕೊಟ್ಟಿರುವ ನಿಟ್ಟಿನಲ್ಲಿ ಸಂಸದರು, ಶಾಸಕರು ಮಧ್ಯಪ್ರವೇಶಿಸಿ ಜನರಲ್ಲಿ ಉಂಟಾಗಿರುವ ಗೊಂದಲಕ್ಕೆ ತೆರೆ ಎಳೆಯಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button