
Crime
ಮರಣಾ ನಂತರ ಆಯುಧ ಮರಳಿಸಿ
ಕಾರವಾರ : ಬೆಳೆ ರಕ್ಷಣೆ ಹಾಗೂ ಸ್ವ ರಕ್ಷಣೆ ಕುರಿತು ಆಯುಧ ( ಲೈಸೆನ್ಸ ಬಂದೂಕು) ಹೊಂದಿದವರು , ಮೃತಪಟ್ಟ ನಂತರ , ಅವರ ಬಂದೂಕು ಪರವಾನಿಗೆ ಲೈಸೆನ್ಸ್ ಹಾಗೂ ಬಂದೂಕನ್ನು ಮರಳಿಸಬೇಕೆಂದು ಜಿಲ್ಲಾಧಿಕಾರಿ ಸಂಬಂಧಿಸಿದವರಿಗೆ ಈ ಪ್ರಕಟಣೆ ಮೂಲಕ ಸೂಚಿಸಿದ್ದಾರೆ.
ಮರಣ ಹೊಂದಿದವರ
ಬಂದೂಕು ಲೈಸೆನ್ಸ (ಅನುಜ್ಞಪ್ತಿ) ಗಳನ್ನು ಕಡ್ಡಾಯವಾಗಿ ರದ್ದುಪಡಿಸಬೇಕಾಗಿರುತ್ತದೆ. ಕಾರಣ ಮೃತಪಟ್ಟ ಅನುಜ್ಙಪ್ತಿದಾರರ ಅವಲಂಬಿತರು ಅನುಜ್ಞಪ್ತಿದಾರರ ಮರಣ ಪತ್ರದ ಪ್ರತಿ ಹಾಗೂ ಮೂಲ ಆಯುಧ ಅನುಜ್ಙಪ್ತಿಯೊಂದಿಗೆ ನೇರವಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಮತ್ತು ಬಂದೂಕನ್ನು ಸಂಬAಧಿಸಿದ ಠಾಣೆಯಲ್ಲಿ ಠೇವಣಿ ಇರಿಸಬೇಕು.
ಒಂದು ವೇಳೆ ಮೂಲ ಆಯುಧ ಲೈಸೆನ್ಸ ಕಳೆದು ಹೋಗಿದ್ದಲ್ಲಿ ಸಂಬಂಧಿಸಿದ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿ, ಸ್ವೀಕೃತಿ ಹಾಗೂ ಅನುಜ್ಞಪ್ತಿ ಸಿಗದ ಬಗ್ಗೆ ಹಿಂಬರವನ್ನು ಲಗತ್ತಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.
……..




