
ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ರಾಜ್ಯ ಮಟ್ಟದ ಕಾರ್ಯಕರ್ತರ ಸಮಾವೇಶ
ದಾವಣಗೆರೆ: ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕದ ವತಿಯಿಂದ ಫೆಬ್ರವರಿ 22-23 ರಂದು ದಾವಣಗೆರೆಯ ತಾಜ್ ಪ್ಯಾಲೆಸ್ ನಲ್ಲಿ ರಾಜ್ಯ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಈ ಸಮಾವೇಶದಲ್ಲಿ ಉದ್ಯಮಶೀಲತೆ, ಸಾಮಾಜಿಕ ಜಾಲತಾಣಗಳ ಪ್ರಭಾವ, ಪರಿಸರ ಸಂರಕ್ಷಣೆ, ನಾಯಕತ್ವ ತರಬೇತಿ ಸೇರಿದಂತೆ ಹಲವಾರು ಕಾರ್ಯಾಗಾರಗಳು ಜರುಗಿದವು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ, ಜಾತಿ ಕ್ರೌರ್ಯದಿಂದ ಪೀಡಿತ ಸಮುದಾಯದ ಯಥಾರ್ಥವನ್ನು ಕಣ್ತುಂಬಿಕೊಳ್ಳುವಂತಾದ ಮೂಗೇಟು ಕನ್ನಡ ನಾಟಕ ಪ್ರದರ್ಶನವಾಯಿತು.
ಈ ಎರಡ ದಿನಗಳ ಅವಧಿಯಲ್ಲಿ ನಡೆದ ಯೂತ್ ಎಕ್ಸ್ಪೋ ವಿಶೇಷ ಆಕರ್ಷಣೆಯಾಗಿತ್ತು. ದೆಹಲಿಯಿಂದ ಆಗಮಿಸಿದ್ದ ಖ್ಯಾತ ಗಾಯಕ ಹೈದರ್ ಸೈಫ್ ಅವರು ಮನಮುಟ್ಟುವ ಗಾಯನ ಕಾರ್ಯಕ್ರಮ ನೀಡಿದರು.
ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿದ್ದ ಯುವ ಕಾರ್ಯಕರ್ತರಿಗೆ ಜಮಾಅತ್ ಎ ಇಸ್ಲಾಮಿ ಹಿಂದ್ ಹಿರಿಯ ಮುಖಂಡರು ಪ್ರೇರಣಾದಾಯಕ ಭಾಷಣಗಳನ್ನು ನೀಡಿದರು. ಜೆಐಎಚ್ ಉಪಾಧ್ಯಕ್ಷರಾದ ಜನಾಬ್ ಎಸ್. ಅಮೀನುಲ್ ಹಸನ್,ಜೆಐಎಚ್ ರಾಜ್ಯಾಧ್ಯಕ್ಷ ಡಾ. ಸಾದ್ ಬೆಳಗಾಮಿ,
ಜೆಐಎಚ್ ರಾಜ್ಯ ಕಾರ್ಯದರ್ಶಿ ಡಾ. ತಾಹಾ ಮತೀನ್,
ಹಾಗೂ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕದ ರಾಜ್ಯಾಧ್ಯಕ್ಷರಾದ ಲಬೀದ್ ಶಾಫಿ ಅವರು ಯುವಕರಿಗೆ ಮಾರ್ಗದರ್ಶನ ನೀಡಿದರು.
ಸಮಾವೇಶದಲ್ಲಿ ಹಲವು ವಿಷಯಗಳ ಮೇಲೆ ಚರ್ಚೆಗಳು ನಡೆಯಿತು ಹಾಗೂ ವಿವಿಧ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.





