
2024 ರಲ್ಲಿ ರಾಜಕಾರಣಿಗಳು ನೀಡಿದ ದ್ವೇಷ ಭಾಷಣ: ಅಗ್ರಸ್ಥಾನದಲ್ಲಿ ಯೋಗಿ ಆದಿತ್ಯನಾಥ್, ಪ್ರಧಾನಿ ಮೋದಿ : ಇಂಡಿಯಾ ಹೇಟ್ ಲ್ಯಾಬ್ ಸಂಶೋಧನಾ ವರದಿ
ಇಂಡಿಯಾ ಹೇಟ್ ಲ್ಯಾಬ್ (ಐಎಚ್‌ಎಲ್) ಇತ್ತೀಚಿನ ವರದಿಯು 2024 ರಲ್ಲಿ ಭಾರತದಾದ್ಯಂತ ದ್ವೇಷ ಭಾಷಣ ಘಟನೆಗಳಲ್ಲಿನ ಆತಂಕಕಾರಿ ಪ್ರವೃತ್ತಿಯನ್ನು ಬಹಿರಂಗಪಡಿಸಿದೆ. ಸಂಶೋಧನೆಗಳ ಪ್ರಕಾರ, 1,165 ದಾಖಲಿತ ದ್ವೇಷ ಭಾಷಣಗಳಲ್ಲಿ 462 (39.7%) ರಾಜಕಾರಣಿಗಳಿಂದ ನೀಡಲ್ಪಟ್ಟಿದ್ದು, ಅಲ್ಪಸಂಖ್ಯಾತ ವಿರೋಧಿ ದ್ವೇಷ ಭಾಷಣ ಉತ್ತೇಜಿಸುವಲ್ಲಿ ರಾಜಕೀಯ ವ್ಯಕ್ತಿಗಳ ಮಹತ್ವದ ಪಾತ್ರವನ್ನು ಬಹಿರಂಗೊಳಿಸಿದೆ.
https://twitter.com/indiahatelab/status/1912710422630748547
ದ್ವೇಷ ಭಾಷಣದಲ್ಲಿ ಪ್ರಮುಖ ನಾಯಕರುಮುಂಚೂಣಿಯಲ್ಲಿದ್ದಾರೆ
ವರದಿಯು ಅತಿ ಹೆಚ್ಚು ದ್ವೇಷ ಭಾಷಣಮಾಡಿರುವ ಪ್ರಮುಖ ರಾಜಕೀಯ ವ್ಯಕ್ತಿಗಳನ್ನು ವರದಿ ಈ ಕೆಳಗಿನಂತೆ ಉಲ್ಲೇಖಿಸಿದೆ
ಯೋಗಿ ಆದಿತ್ಯನಾಥ್ (ಉತ್ತರ ಪ್ರದೇಶದ ಮುಖ್ಯಮಂತ್ರಿ) – 86
ನರೇಂದ್ರ ಮೋದಿ (ಪ್ರಧಾನಿ) – 67
ಅಮಿತ್ ಶಾ (ಗೃಹ ಸಚಿವ) – 58
ಹಿಮಂತ ಬಿಸ್ವ ಶರ್ಮಾ (ಅಸ್ಸಾಂ ಮುಖ್ಯಮಂತ್ರಿ) – 36
ಟಿ ರಾಜಾ ಸಿಂಗ್ (ಬಿಜೆಪಿ ಶಾಸಕರು, ತೆಲಂಗಾಣ) – 32
ಇತರ ಗಮನಾರ್ಹ ಹೆಸರುಗಳಲ್ಲಿ
ಮಹಾರಾಷ್ಟ್ರದ ನಿತೇಶ್ ರಾಣೆ (29), ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ (17), ಮತ್ತು ದೆಹಲಿ ಬಿಜೆಪಿ ನಾಯಕಿ ಅಶ್ವಿನಿ ಉಪಾಧ್ಯಾಯ (14) ಸೇರಿದ್ದಾರೆ.




