Featured StoryState News

ಸಾಲಿಡಾರಿಟಿ ಯೂತ್ ಮೂಮೆಂಟ್ ನ ನೂತನ ರಾಜ್ಯ ಕಚೇರಿ ಉದ್ಘಾಟನೆ

ಬೆಂಗಳೂರು, ಮೇ 10:ಕರ್ನಾಟಕದ ಸಾಲಿಡಾರಿಟಿ ಯೂತ್ ಮೂಮೆಂಟ್ ಇದೀಗ ತನ್ನ ಕಾರ್ಯಚಟುವಟಿಕೆಗಳಲ್ಲಿ ಹೊಸ ಅಧ್ಯಾಯವನ್ನು ಬರೆಯಲು ಪ್ರಾರಂಭಿಸಿದೆ. ಜಮಾಅತ್ ಇಸ್ಲಾಮಿ ಹಿಂದ್ ಕರ್ನಾಟಕದ ಅಧ್ಯಕ್ಷರಾದ ಡಾ. ಮೊಹಮ್ಮದ್ ಸಾದ್ ಬಿಲ್ಗಾಮಿಯವರಿಂದ ನೂತನ ರಾಜ್ಯ ಕಚೇರಿ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಶೂರಾ ಸದಸ್ಯರು ಉಪಸ್ಥಿತರಿದ್ದರು.

ಸಾಲಿಡಾರಿಟಿಯ ಅಧ್ಯಕ್ಷರಾದ ಡಾ. ನಸೀಮ್ ಅವರು ಮಾತನಾಡುತ್ತಾ, “ನಮ್ಮ ಚಳವಳಿ ಕೇವಲ ಪ್ರತಿಭಟನೆಗಳಿಗೆ ಅಥವಾ ಪ್ರತಿನಿಧಿತ್ವದ ಹೋರಾಟಗಳಿಗೆ ಸೀಮಿತವಲ್ಲ. ಇದು ಯುವ ಸಮುದಾಯದ ಸಮಗ್ರ ಅಭಿವೃದ್ದಿಗೆ, ಅವರ ಸಾಮರ್ಥ್ಯಗಳನ್ನು ಗುರುತಿಸಿ ಬೆಳೆಸುವುದಕ್ಕೂ, ಹಾಗೂ ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಹುಡುಕುವುದಕ್ಕೊಳಗೊಂಡಿದೆ ಎಂದು ಹೇಳಿದರು. ಜೊತೆಗೆ ಯುವಕರಲ್ಲಿ ಕೌಶಲ್ಯಾಭಿವೃದ್ಧಿ (Skill Development) ಹಾಗೂ ಉದ್ಯೋಗೋಚಿತ ಕೌಶಲ್ಯಗಳ (Employable Skills) ಮೇಲಿನ ಗಮನ ಹೆಚ್ಚಿಸಲು ಆಶಯ ವ್ಯಕ್ತಪಡಿಸಿದರು.

IMG 20250511 WA0044 Featured Story, State News

ಡಾ. ಸಅದ್ ಬಿಲ್ಗಾಮಿ ಅವರು ಮಾತನಾಡುತ್ತಾ, “ತಹ್ರೀಕ್ ಇಸ್ಲಾಮಿ ಪ್ರಾರಂಭದಿಂದಲೂ ಯುವ ಶಕ್ತಿಗೆ ಪ್ರಾಮುಖ್ಯತೆ ನೀಡಿದೆ. ಪ್ರತ್ಯೇಕ ಸಂಸ್ಥೆಗಳು, ವೇದಿಕೆಗಳು ಮತ್ತು ಚಟುವಟಿಕೆಗಳ ಮೂಲಕ ಯುವಜನರ ಚಿಂತನೆ ಮತ್ತು ನಾಯಕತ್ವವನ್ನು ಬೆಳೆಸಲು ನಿರಂತರವಾಗಿ ಪ್ರಯತ್ನಿಸಲಾಗಿದೆ. ಎಂದು ಹೇಳಿದರು. ಅವರು 2022ರ ರಾಜ್ಯಮಟ್ಟದ ಯುವ ಕನ್ವೆನ್ಶನ್ ಬಳಿಕ ಈ ಚಳವಳಿಯ ರಾಜ್ಯ ವ್ಯಾಪ್ತಿ ಬಹುತೇಕ ಜಿಲ್ಲೆಯವರೆಗೆ ವಿಸ್ತಾರಗೊಂಡಿದೆ ಎಂಬುದನ್ನು ಉಲ್ಲೇಖಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ರಾಜ್ಯಾಧ್ಯಕ್ಷರಾದ ಇಕ್ಬಾಲ್ ಮುಲ್ಲ ಹಾಗೂ ಅತ್ಹರುಲ್ಲಾ ಶರೀಫ್, ಕಾರ್ಯದರ್ಶಿಗಳು, ಉಪಸ್ಥಿತರಿದ್ದರು. ಸಲ್ಮಾನ್ ಮನಿಯಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಮತ್ತು ಆತಿಥ್ಯ ಸ್ವೀಕಾರದೊಂದಿಗೆ ಸಮಾರಂಭ ಮುಕ್ತಾಯಗೊಂಡಿತು.

ಹೊಸ ಕಚೇರಿ, ಕೇವಲ ಆಡಳಿತಾತ್ಮಕ ಕೇಂದ್ರವಲ್ಲ; ಬದಲಾಗಿ ಮುಂದಿನ ದಿನಗಳಲ್ಲಿ ರಾಜ್ಯದ ಯುವ ಸಮುದಾಯಕ್ಕೆ ಮಾರ್ಗದರ್ಶನ, ತರಬೇತಿ ಹಾಗೂ ನಾಯಕತ್ವದ ಬುನಾದಿಯುತ ವೇದಿಕೆಯಾಗಲಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button