
Uttara Kannada
ರೈತನ ಮೇಲೆ ಕರಡಿ ದಾಳಿ
ಕಾರವಾರ : ಜೊಯೀಡಾ ತಾಲೂಕಿನ ಹುಡುಸಾ ಗ್ರಾಮದ ತನ್ನ ಹೊಲಕ್ಕೆ ಬೇಲಿ ನಿರ್ಮಿಸುತ್ತಿದ್ದ ರೈತನೋರ್ವನ ಮೇಲೆ ಕರಡಿ ದಾಳಿ ನಡೆಸಿದ್ದು,ಪರಿಣಾಮ ರೈತ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ನಡೆದಿದೆ.
ತುಕಾರಾಮ ದೇಸಾಯಿ (45) ಗಾಯಗೊಂಡ ರೈತನಾಗಿದ್ದಾನೆ. ಇವರು ತಮ್ಮ ಜಮೀನಿಗೆ ಬೇಲಿ ನಿರ್ಮಿಸುತ್ತಿದ್ದರು ಈ ವೇಳೆ ಕರಡಿ ದಾಳಿ ನಡೆಸಿದ್ದು, ಇದರಿಂದಾಗಿ ರೈತನ ಮುಖ,ತಲೆ,ಕೈ ಕಾಲು,ಎದೆ ಭಾಗದಲ್ಲಿ ಗಂಭೀರವಾಗಿ ಗಾಯವಾಗಿದೆ.
ಗಾಯಗೊಂಡ ರೈತನಿಗೆ ಜೊಯಿಡಾ ತಾಲೂಕಾ ಆಸ್ಪತ್ರೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಗಂಭೀರವಾಗಿ ಗಾಯಗೊಂಡ , ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಎಸ್.ಡಿ.ಎಮ್ ಆಸ್ಪತ್ರೆಗೆ ಕಳುಹಿಸಲಾಗಿದೆ.




