
Featured Story
ಹಿಮಾಚಲ ಪ್ರದೇಶದಲ್ಲಿ ಭಯಾನಕ ಭೂಕುಸಿತ: ಹಲವು ವಾಹನ ಮತ್ತು ಜನರು ಸಿಲುಕಿಗೊಂಡಿರುವ ಆತಂಕ!
ಹಿಮಾಚಲ: ರಸ್ತೆಯ ಪಕ್ಕದಲ್ಲಿ ಭೂ ಕುಸಿತವುಂಟಾಗಿ ಹಲವು ವಾಹನಗಳು ಮತ್ತು ಜನರ ಸಿಲುಕಿರುವ ಕುರಿತು ವರದಿಯಾಗಿದೆ.
ರೆಕಾಂಗ್ ಪಿಯೊ ಶಿಮ್ಲಾ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದ್ದು ಟ್ರಕ್ಕ್, ಬಸ್ ಮತ್ತು ಇತರ ವಾಹನಗಳು ಸಿಲುಕಿರುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಬಸ್ಸಿನಲ್ಲಿ 40 ಮಂದಿಯಿದ್ದರು ಎಂದು ವರದಿಯಾಗಿದೆ.
ಐಟಿಬಿಪಿ ಸಿಬ್ಬಂದಿಗಳು ರಕ್ಷಣಾ ಕಾರ್ಯಚರಣೆಗೆ ಧಾವಿಸಿದ್ದು ಇದೀಗ ಎನ್.ಡಿ.ಆರ್.ಎಫ್ ತಂಡ ಸ್ಥಳಕ್ಕಾಗಮಿಸಲಿದೆ ಎಂದು ಮುಖ್ಯಮಂತ್ರಿ ಜೈರಾಮ್ ಥಾಕೂರ್ ತಿಳಿಸಿದ್ದಾರೆ.
ಭಾರೀ ಮಳೆಯಿಂದಾಗಿ ಹಿಮಾಚಲ ಪ್ರದೇಶದ ಹಲವು ಕಡೆಗಳಲ್ಲಿ ಭೂಕುಸಿತದ ವರದಿಯಾಗಿದೆ. ಈ ಮುಂಚೆ ಕೂಡ ಭೂ ಕುಸಿತ ಹಲವು ಭಯಾನಕ ವೀಡಿಯೋ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿತ್ತು.




