
Featured Story
ಕಂದಹಾರ್ ವಶಪಡಿಸಿಕೊಂಡ ತಾಲಿಬಾನ್!
ಅಫಘಾನಿಸ್ತಾನ: ಇದೀಗ ತಾಲಿಬಾನ್ ಸಂಪೂರ್ಣವಾಗಿ ಅಫಘಾನಿಸ್ತಾನವನ್ನು ವಶಪಡಿಸಿಕೊಳ್ಳುವತ್ತ ಮುನ್ನುಗ್ಗುತ್ತಿದ್ದು ದೇಶದ ಎರಡನೇ ಅತೀ ದೊಡ್ಡ ನಗರ ಕಂದಹಾರ್’ನ್ನು ವಶಪಡಿಸಿಕೊಂಡಿದೆ.
ಇದೀಗ ಹನ್ನೆರಡನೇ ಪ್ರಾಂತ್ಯವನ್ನು ತಲಿಬಾನಿಗರು ತಮ್ಮ ಕೈವಶ ಮಾಡಿಕೊಳ್ಳುತ್ತಿದ್ದಾರೆ. ಕಾಬೂಲನ್ನು ಕೂಡ ವಶಪಡಿಸಿಕೊಳ್ಳುವಲ್ಲಿ ಮುನ್ನುಗ್ಗುತ್ತಿದೆ. ಈಗಾಗಲೇ ಅಮೇರಿಕನ್ನರು ಕಾಬೂಲ್ ತೊರೆಯಲು ಯುಎಸ್ ಸರಕಾರ ಘೋಷಿಸಿದೆ. ಈಗಾಗಲೇ ತಾಲಿಬಾನ್ ಕಂದಹಾರವನ್ನು ವಶಪಡಿಸಿಕೊಂಡ ಬಗ್ಗೆ ಹೇಳಿಕೊಂಡಿದೆ.
ಇದೀಗ ಅಫಘಾನ್ ಸರಕಾರ ಒಂದೊಂದಾಗಿ ಪ್ರದೇಶಗಳನ್ನು ಕಳೆದುಕೊಳ್ಳುತ್ತಿದೆ. ಅಮೇರಿಕಾ ಸೈನ್ಯ ಪಡೆ ಹಿಂಪಡೆದ ನಂತರ ಇದೀಗ ತಾಲಿಬಾನ್ ತನ್ನ ದಾಳಿ ಮುಂದುವರಿಸಿಕೊಂಡು ಹೋಗಿದ್ದು ಇದರಿಂದಾಗಿ ಅಫಘಾನ್ ಸರಕಾರ ಪ್ರಸ್ತುತ ಅಸಹಾಯಕ ಸ್ಥಿತಿಯಲ್ಲಿದೆ.




