Featured StoryPoliticsState News

ಕ್ಯಾಂಟಿನ್’ಗೆ ಯಾವ ಹೆಸರು ಇಡಬೇಕೆಂದು ಜನ ನಿರ್ಧರಿಸಲಿ – ಸಚಿವ ಸುನೀಲ್ ಕುಮಾರ್

ಬೆಂಗಳೂರು: ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಇದೀಗ ಹೇಳಿಕೆ ಪ್ರತಿ ಹೇಳಿಕೆಗಳು ಜೋರಾಗಿ ನಡೆಯುತ್ತಿದೆ. ಈ ಕುರಿತು ಮಾತನಾಡಿರುವ ಇಂಧನ ಸಚಿವ ಸುನಿಲ್ ಕುಮಾರ್, ಇಂದಿರಾ ಕ್ಯಾಂಟಿನ್ ಹೆಸರು ಬದಲಾಯಿಸಬೇಕೆ ಬೇಡವೇ ಎನ್ನುವುದನ್ನು ಸರ್ಕಾರದಿಂದ ಉಚಿತವಾದ ಅನ್ನ ಸ್ವೀಕರಿಸುವ ಜನರೇ ನಿರ್ಧಾರ ಮಾಡಲಿ ಎಂದರು.

ಇಂದಿರಾ ಕ್ಯಾಂಟಿನ್ ಹೆಸರಿಡಬೇಕೇ, ಅನ್ನಪೂರ್ಣೇಶ್ವರಿ ಹೆಸರು ಬೇಕಾ ಎನ್ನುವುದನ್ನು ಜನರ ಅಭಿಪ್ರಾಯ ಸಂಗ್ರಹ ಆಗಲಿ. ಯಾವ ಹೆಸರಿಟ್ಟರೆ ಉಚಿತ ಅನ್ನ ಆಹಾರ ಸ್ವೀಕರಿಸಲು ಒಳ್ಳೆಯದು ಎನ್ನುವ ಬಗ್ಗೆ ಜನಾಭಿಪ್ರಾಯ ಸಂಗ್ರಹವಾಗಲಿ ಎಂದು ಹೇಳಿದರು.

ಕಾಂಗ್ರೆಸ್ ಏನೂ ನಮಗೆ ಸಂಸ್ಕೃತಿ ಕಲಿಸಿಕೊಡುವ ಅಗತ್ಯವಿಲ್ಲ. ಕಾಂಗ್ರೆಸ್ ಸಂಸ್ಕೃತಿ ಏನು ಎನ್ನುವುದು ನಮಗೆಲ್ಲ ಗೊತ್ತಿದೆ. ಹಿಂದೆ‌ ವಾಜಪೇಯಿ ಚತುಷ್ಪಥ ರಸ್ತೆ ನಿರ್ಮಾಣ ಆದಾಗ ಇದೇ ಕಾಂಗ್ರೆಸ್ ದೇಶಾದ್ಯಂತ ಹೆಸರು ಬದಲಾಯಿಸಲು ಹೊರಟಿದ್ದರು. ವಾಜಪೇಯಿ ಚತುಷ್ಪಥ ರಸ್ತೆಯ ಬೋರ್ಡ್ ಬದಲಾಯಿಸುವುದಕ್ಕಾಗಿಯೇ ಹೆಚ್ಚಿನ ಹಣ ಬಿಡುಗಡೆ ಮಾಡಿದ್ದರು. ಹೀಗಾಗಿ ಅವರಿಂದ ನಾವೇನು ಕಲಿಬೇಕಾಗಿಲ್ಲ. ಆದರೆ ಕ್ಯಾಂಟಿನ್ ಗೆ ಯಾವ ಹೆಸರಿಡಬೇಕು ಎಂಬ ಬಗ್ಗೆ ಜನಾಭಿಪ್ರಾಯ ಸಂಗ್ರಹವಾಗಲಿ ಎಂದು ಸುನೀಲ್ ಕುಮಾರ್ ಹೇಳಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button