
ತಾಲಿಬಾನಿಗರು ಯಾರು? – ಅಫಘಾನಿಸ್ತಾನದಲ್ಲಿ ನಡೆಯುತ್ತಿರುವುದೇನು?
(ದಿ ಹಿಂದುಸ್ತಾನ್ ಗಝೆಟ್): ಅಫಘಾನಿಸ್ತಾನದಲ್ಲಿ ನಡೆಯುತ್ತಿರುವ ಬಿಕ್ಕಟ್ಟು ಇದೀಗ ವಿಶ್ವದ ಚರ್ಚಾ ವಿಷಯ. ತಾಲಿಬಾನಿಗಳು ಇದೀಗ ಕಾಬೂಲಿನಲ್ಲಿ ಅಫಘಾನ್ ಅಧ್ಯಕ್ಷರ ಭವನವನ್ನು ಕೈವಶಪಡಿಸಿಕೊಳ್ಳುವ ಮುಖಾಂತರ ಇದೀಗ ಅಫಘಾನಿಸ್ತಾನದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದೆ.
ತಾಲಿಬಾನಿಗರು ಯಾರು?
1990 ರ ಅಸುಪಾಸಿನಲ್ಲಿ ಅಫಘಾನಿಸ್ತಾನದಲ್ಲಿರುವ ಸೋವಿಯತ್ ಸೈನ್ಯವನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಉತ್ತರ ಪಾಕಿಸ್ತಾನದಲ್ಲಿ ಹುಟ್ಟಿಕೊಂಡ ಬಂಡುಕೋರರ ಗುಂಪು. 1996 ರಲ್ಲಿ ಅಫಘಾನಿಸ್ತಾನದ ಹಲವು ಪ್ರಾಂತ್ಯಗಳನ್ನು ಶೀಘ್ರ ವಶಪಡಿಸಿಕೊಳ್ಳುವ ಮೂಲಕ ಪ್ರಾಬಲ್ಯ ಸಾಧಿಸಲು ಆರಂಭಿಸಿದರು. 1998 ರಲ್ಲಿ 98% ಅಫಘಾನಿಸ್ತಾನ ತಾಲಿಬಾನ್ ಅವರ ವಶದಲ್ಲಿತ್ತು. ಆದರೆ ಆ ಸಂದರ್ಭದಲ್ಲಿ ಅವರು ಶೀಪ್ರವಾಗಿ ಶರಿಯಾತ್ ಕಾನೂನುಗಳನ್ನು ಅಳವಡಿಸಲು ಆರಂಭಿಸಿದರು. ಸಿನಿಮಾ, ಸಂಗೀತದ ಮೇಲೆ ನಿರ್ಬಂಧ ಹೇರಲು ಆರಂಭಿಸಿದರು. ಹಲವಾರು ಬೆಳವಣಿಗೆಗಳು ಆ ಸಂದರ್ಭದಲ್ಲಿ ನಡೆದಿತ್ತು. ಈ ಕುರಿತು ವಿಶ್ವದಾದ್ಯಂತ ಟೀಕೆ ವ್ಯಕ್ತವಾಗಿತ್ತು.
ನಂತರ ಅಮೇರಿಕಾದಲ್ಲಿ 2001 ರ ವರ್ಲ್ಡ್ ಟ್ರೇಡ್ ಸೆಂಟರ್ ದಾಳಿಯ ನಂತರ ತಾಲಿಬಾನಿಗರು ಅಲ್ ಖೈದಾಕ್ಕೆ ಸಹಕರಿಸುತ್ತಿದೆಯೆಂಬ ಆರೋಪ ಬಂದ ಮೇಲೆ ಅಫಘಾನಿಸ್ತಾನದಲ್ಲಿ ಅಮೇರಿಕಾ ಸೇನೆ ಕಾರ್ಯಚರಿಸಲು ಆರಂಭಿಸಿತು.
ಇದೀಗ ಜೊಯ್ ಬಿಡೆನ್ 20 ವರ್ಷದ ನಂತರ ಕತಾರ್ ನಲ್ಲಿ ತಾಲಿಬಾನಿಗರೊಂದಿಗೆ ನಡೆದ ಸಭೆಯ ನಂತರ ಏಕಾಏಕಿ ಅಮೇರಿಕಾ ತನ್ನ ನ್ಯಾಟೊ ಪಡೆಯನ್ನು ಹಿಂಪಡೆಯಿತು. ಹಿಂಪಡೆದ ಬೆನ್ನಲ್ಲೇ ತಾಲಿಬಾನ್ ಇದೀಗ ಶೀಪ್ರಗತಿಯಲಿ ಅಫಘಾನಿಸ್ತಾನವನ್ನು ಅಕ್ರಮಿಸಿಕೊಂಡಿದೆ. ಈ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ತಾಲಿಬಾನಿಗರು ಅಂತರಾಷ್ಟ್ರೀಯ ಶಾಂತಿ ಮಾತುಕತೆಯ ಕುರಿತು ಮಾತನಾಡುತ್ತಿದ್ದಾರೆ. ಭಾರತದೊಂದಿಗೆ ಸಹಕಾರದ ಕುರಿತು ಕೂಡ ಅದರ ವಕ್ತಾರರು ಮಾತುಕತೆ ನಡೆಸುತ್ತಿದ್ದಾರೆ. ಆದರೆ ಅಂತರಾಷ್ಟ್ರೀಯ ಮಾಧ್ಯಮಗಳಾದ ಬಿಬಿಸಿ, ಅಲ್ ಜಝಿರಾ ವರದಿಯ ಪ್ರಕಾರ ತಾಲಿಬಾನಿಗರ ಮಾತನ್ನು ಸರಕಾರ ರೀತಿ ನೀತಿಗಳ ಆಧಾರದಲ್ಲಿ ನಂಬಬಹುದೇ ವಿನಾ ಇದೀಗ ನಂಬುವುದು ಬಹುಬೇಗವಾಗಲಿಯೆಂದು ಅಭಿಪ್ರಾಯ ಪಟ್ಟಿದೆ.




