
Featured Story
ಚೀನಾದ ಮೇಲಿನ ಅವಲಂಬಿಕೆ ಹೆಚ್ಚಾದರೆ ನಾವು ಅವರ ಮುಂದೆ ತಲೆ ಬಾಗಬೇಕಾಗುತ್ತದೆ – ಮೋಹನ್ ಭಾಗವತ್
ನವದೆಹಲಿ: ಚೀನಾದ ಮೇಲೆ ಭಾರತದ ಅವಲಂಬನೆ ಹೆಚ್ಚಾದರೆ ಮುದೊಂದು ದಿನ ನಾವು ಅವರ ಮುಂದೆ ತಲೆ ಬಾಗಬೇಕಾಗುತ್ತದೆಯೆಂದು ಆರ್.ಎಸ್.ಎಸ್ ಮುಖಂಡ ಅಭಿಪ್ರಾಯ ಪಟ್ಟಿದ್ದಾರೆ.
ಸ್ವದೇಶಿ ಎಂದರೆ ಭಾರತದಲ್ಲೇ ಉದ್ಯಮ ಮಾಡುವುದಾಗಿದೆ. ಆದರೆ ಇಂದು ನಾವು ಎಲ್ಲದರಲ್ಲೂ ಚೀನಾವನ್ನು ಅವಲಂಬಿಸಿಕೊಂಡಿದ್ದೇವೆ. ನಾವು ತಂತ್ರಜ್ಞಾನವನ್ನು ಅತೀ ಹೆಚ್ಚಾಗಿ ಬಳಸುತ್ತೇವೆ. ಆದರೆ ಅದೆಲ್ಲವೂ ಹೆಚ್ಚಾಗಿ ಹೊರ ದೇಶಗಳಿಂದ ಬರುತ್ತದೆ ಎಂದರು. ನಾವು ಎಷ್ಟೇ ಚೀನಾದ ಬೊಬ್ಬೆ ಹೊಡೆದರೂ ಅವರ ಅವಲಂಬನೆ ಕಡಿಮೆಯಾಗಿಲ್ಲ ಎಂದರು.
ನಿಮ್ಮ ಮೊಬೈಲ್ ಫೋನ್’ಗಳು ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು. ಅರ್ಥಿಕ ಸಬಲೀಕರಣ ಅತೀ ಅಗತ್ಯವಾಗಿದೆ. ತಂತ್ರಜ್ಞಾನ ಅಳವಡಿಕೆ ನಮ್ಮ ನೀತಿಯ ಪ್ರಮುಖ ಅಂಶವಾಗಿರಬೇಕೆಂದು ಕರೆ ನೀಡಿದರು.




