Featured Story

ಕಾಂಗ್ರೆಸ್ ಖಾತೆ ಸಾರ್ವಜನಿಕರಿಂದ ರದ್ದಾಗಿದೆ, ಇದೀಗ ಟ್ವೀಟರ್ ರಾಹುಲ್ ಖಾತೆ ಲಾಕ್ ಮಾಡಲಿ – ಜೆ.ಪಿ ನಡ್ಡಾ

ನವದೆಹಲಿ: ರಾಹುಲ್ ಗಾಂಧಿ ಟ್ವೀಟರ್ ಖಾತೆಯನ್ನು ತಾತ್ಕಾಲಿಕವಾಗಿ ರದ್ದು ಮಾಡಿದ ವಿಚಾರದಲ್ಲಿ ಮಾತನಾಡಿದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಾಹುಲ್ ಗಾಂಧಿ ಸಂತ್ರಸ್ಥ ಬಾಲಕಿಯ ಪೋಷಕರ ಅನುಮತಿಯಿಲ್ಲದೆ ರಾಹುಲ್ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. ಅವರ ಖಾತೆಯನ್ನು ಟ್ವೀಟರ್ ಮತ್ತೆ ರದ್ದು ಮಾಡಬೇಕೆಂದು ಆಗ್ರಹಿಸಿದರು.

ಸಾರ್ವಜನಿಕರು ಕಾಂಗ್ರೆಸ್ ಖಾತೆಯನ್ನು ಈಗಾಗಲೇ ರದ್ದು ಮಾಡಿದ್ದಾರೆ. ಈಗ ರಾಹುಲ್ ಖಾತೆಯನ್ನು ಟ್ವೀಟರ್ ರದ್ದು ಮಾಡಲಿಯೆಂದು ವ್ಯಂಗ್ಯವಾಡಿದ್ದಾರೆ. ರಾಹುಲ್ ಗಾಂಧಿ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದ್ದು, ಅವರು ಹವ್ಯಾಸಿ ಸುಳ್ಳುಗಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚಿಗೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಟ್ವೀಟರ್ ಖಾತೆಯನ್ನು ತಾತ್ಕಾಲಿಕ ಅಮಾನತಿನಲ್ಲಿಡಲಾಗಿತ್ತು. ಇದೀಗ ಮತ್ತೆ ಅನ್’ಲಾಕ್ ಮಾಡಿದ ನಂತರ ಜೆ.ಪಿ ನಡ್ಡಾ ಮತ್ತೆ ಲಾಕ್ ಮಾಡಲು ಸಾಮಾಜಿಕ ಜಾಲತಾಣದ ದೈತ್ಯ ಟ್ವೀಟರ್ ನ್ನು ಆಗ್ರಹಿಸಿದ್ದಾರೆ.

ರಾಹುಲ್ ಗಾಂಧಿ ಟ್ವೀಟರ್ ತನ್ನ ರಾಜಕೀಯ ನಿಲುವಿನಲ್ಲಿ ಮೂಗು ತೂರಿಸುತ್ತಿರುವುದನ್ನು ಈ ಸಂದರ್ಭದಲ್ಲಿ ಖಂಡಿಸಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button