
ಗಾಂಜಾ ಮಾರಾಟ / ಸರಬರಾಜು | ಎರಡು ಪ್ರತ್ಯೇಕ ಪ್ರಕರಣ : ಐವರು ಆರೋಪಿಗಳು ಅಂದರ್
ಅಕ್ರಮ ಗಾಂಜಾ ಮಾರಾಟ / ಸರಬರಾಜು/ಸೇವನೆಯ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಸೋಮವಾರಪೇಟೆ ಮತ್ತು ಶನಿವಾರಸಂತೆ ಠಾಣೆ ಪೊಲೀಸರು ಆರೋಪಿ ಯುವತಿಯೋರ್ವಳ ಸಮೇತ ಒಟ್ಟು ಐವರನ್ನು ಬಂಧಿಸಿ ಒಟ್ಟು 1.628 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.
ಫೆಬ್ರುವರಿ 1 ರಂದು ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಾಪುರದಲ್ಲಿ ದಾಳಿ ನಡೆಸಿರುವ ಪೊಲೀಸರು ನಾಲ್ವರು ಮಾದಕ ವಸ್ತು ವ್ಯಸನಿಗಳನ್ನು ಬಂಧಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಶನಿವಾರಸಂತೆ ಠಾಣಾ ವ್ಯಾಪ್ತಿಯ ಕೊಡ್ಲಿಪೇಟೆಯಲ್ಲಿ ಫೆಬ್ರವರಿ 2 ರಂದು ಒಬ್ಬ ಆರೋಪಿಯನ್ನು ನಿಷೇಧಿತ ಮಾದಕ ವಸ್ತುವಿನೊಂದಿಗೆ ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಆರೋಪಿಗಳಿಂದ 1ಕೆ.ಜಿ. 628 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಸೋಮವಾರಪೇಟೆ ಹಾಗೂ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ
*ಬಂದಿತ ಆರೋಪಿಗಳು:*
1) ಮಾದಾಪುರದ ಆಕಾಶ್ ಎಂ.ಸಿ. (21)
2) ಮಡಿಕೇರಿಯ ಹೊಸ ಬಡಾವಣೆಯ ತ್ರಿಶೂಲ್ ಪಿ.ಎಲ್. (20)
3) ಮಡಿಕೇರಿಯ ಮಂಗಳದೇವಿ ನಗರದ ನಿತ್ಯ ಎಂ.ಸಿ. (20)
4) ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಜಾಲ್ಸುರುವಿನ ಧನುಷ್ ಕೆ. ಆರ್. (22)
5) ಕೊಡ್ಲಿಪೇಟೆಯ ಶಾಂತಪುರದ ಭರತ್ ಕೆ.ಎಂ. (28)
ತನಿಖಾ ತಂಡ:
ಸೋಮವಾರಪೇಟೆ DSP ಚಂದ್ರಶೇಖರ್, ಶನಿವಾರಸಂತೆ ಪೊಲೀಸ್ ಇನ್ಸ್ ಪೆಕ್ಟರ್ ಕೃಷ್ಣರಾಜು, ಮಡಿಕೇರಿ ನಗರ ವೃತ್ತ ನಿರೀಕ್ಷಕರಾದ ರಾಜು ಪಿ.ಕೆ. ಶನಿವಾರಸಂತೆ ಇನ್ಸ್ ಪೆಕ್ಟರ್ ಚಂದ್ರ ಹೆಚ್. ವೈ, ಪೊಲೀಸ್ ಇನ್ಸ್ ಪೆಕ್ಟರ್ ಗೋವಿಂದ್ ರಾಜ್ ಎಚ್ ಸಿ, ಸುಂಟಿಕೊಪ್ಪ ಪಿಎಸ್ಐ ಮೋಹನ್ ರಾಜ್ ಪಿ, ಸೋಮವಾರಪೇಟೆ ಪಿಎಸ್ಐ ಗೋಪಾಲ ಎಂ. ಎ, ಡಿ.ಸಿ.ಆರ್.ಬಿ. ಯ ಗೋಪಾಲ ಎಚ್. ಸಿ, ನಿರಂಜನ್ ಹೆಚ್.ಸಿ.
ಎಸ್ಪಿ ಶ್ಲಾಘನೆ: ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಬಿಂದುಮಣಿ ಆರ್.ಎನ್. ರವರು ಶ್ಲಾಘಿಸಿದ್ದಾರೆ.




