
Crime
ಬೀದರ್: ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ಕರಾಟೆ ತರಬೇತಿ
ಬೀದರ್ ಡಿ.03: ಬ್ರೂಷ್ ಲೀ ಬೂಡೋಕನ್ ಯೋಗ ಕರಾಟೆ ತರಬೇತಿ ಸಂಸ್ಥೆ ವತಿಯಿಂದ ಬೀದರ ನಗರದ ಪೊಲೀಸ್ ಕವಾಯತ್ತು ಮೈದಾನದಲ್ಲಿ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 11 ತಂಡದ ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ಇತ್ತಿಚೆಗೆ ಕರಾಟೆ ತರಬೇತಿ ಶೀಬಿರ ನಡೆಯಿತು.
ಈ ಶೀಬಿರವೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ, ಪೊಲೀಸ್ ತರಬೇತಿ ಶಾಲೆಯ ಪ್ರಾಶುಂಪಾಲ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ|| ಗೋಪಾಲ್ ಬ್ಯಾಕೋಡ್ ಅವರ ಮಾರ್ಗದರ್ಶನ ಮತ್ತು ಉಪ ಪ್ರಾಶುಂಪಾಲರಾದ ಸುನೀಲ ಕೋಡ್ಲಿ ಅವರ ನೇತೃತ್ವದಲ್ಲಿ ನಡೆಯಿತು.
12 ದಿನ 20 ಕ್ಲಾಸಗಳಲ್ಲಿ 31 ಪೊಲೀಸ್ ಪ್ರಶಿಕ್ಷಣಾರ್ಥಿಗಳು ಕರಾಟೆಯ ಹಲವಾರು ಆತ್ಮರಕ್ಷಣಾ ಕಲೆಗಳು ಹಾಗೂ ಕಟಾ, ಮೂಮೆಂಟ್ ಕರಗತ ಮಾಡಿಕೊಂಡರು ಎಂದು ಕರಾಟೆ ತರಬೇತಿದಾರ ಹಾಗೂ ಬ್ರೂಷ್ ಲೀ ಬೂಡೋಕನ್ ಯೋಗ ಕರಾಟೆ ತರಬೇತಿ ಸಂಸ್ಥೆಯ ಅಧ್ಯಕ್ಷರಾದ ಶಿವರಾಮ ರಾಠೋಡ್ ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಹ ತರಬೇತಿದಾರರಾದ ದೀಪಕ್ ರಾಠೋಡ್ ಸುನೀಲ ಭಾವಿಕಟ್ಟಿ ಇದ್ದರು.




