
ರಾಯಚೂರು: ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಮನವಿ
ರಾಯಚೂರು,ಡಿ.04:- ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ವಿಶೇಷ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
2021ರ ಜನವರಿ 01ರ ಅರ್ಹತಾ ದಿನಾಂಕದ ವಿಶೇಷ ಪರಿಷ್ಕರಣೆ ಮತಪಟ್ಟಿಯ ಯುವ ಮತದಾರರ ನೋಂದಾಯಿಸಲು ನೆವೆಂಬರ್15 ರಿಂದ ಡಿಸೆಂಬರ್ 15ರ ವರೆಗೆ ಒಂದು ತಿಂಗಳು ರಾಯಚೂರು ತಾಲೂಕಿನ ಯುವ ಮತದಾರರು ಹಾಗೂ ಮತದಾರರಪಟ್ಟಿಯಿಂದ ಹೋರಗುಳಿದ ಮತದಾರರಿಗೆ ಕಲ್ಪಿಸಲಾಗಿದೆ.
ಮತದಾರರ ನಮೂನೆ 6, 7, 8 ಮತ್ತು 8ಎ ಅರ್ಜಿಯನ್ನು (ಸೇರ್ಪಡೆ, ತೆಗೆದು ಹಾಕುವುದು, ತಿದ್ದುಪಡಿ ಹಾಗೂ ಸ್ಥಳಾಂತರ ಹೊಂದಿದ್ದಲ್ಲಿ) ಸಾವಜನಿಕರಿಗೆ ಸಂಬಂಧಪಟ್ಟ ಭಾಗದ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಅರ್ಹ ದಾಖಲೆಗಳನ್ನು ಧೃಡಿಕರಿಸಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಸದುಪಯೋಗ ಪಡಿಸಿಕೊಳ್ಳಬೇಕು. ಇದು ಅಲ್ಲದೆ ವಿಶೇಷ ನೋಂದಣಿ ಪರಿಷ್ಕರಣೆ 2020 ಡಿ.6 ಹಾಗೂ ಡಿ.13ರ ಭಾನುವಾರದಂದು ಮತಗಟ್ಟೆ ಮಟ್ಟದ ಅಧಿಕಾರಿಗಳ ಆಯಾ ಕೇಂದ್ರ ಕಛೇರಿಗೆ ಭೇಟಿ ನೀಡಿ ವಿಶೆಷ ಆಂದೋಲನವನ್ನು ಯಶ್ವಸಿಗೊಳಿಸಬೇಕೆಂದು ಸಹಾಯಕ ಮತದಾರರ ನೋಂದಾಣಾಧಿಕಾರಿಗಳೂ ಆಗಿರುವ ರಾಯಚೂರು ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




