ರಾಯಚೂರು: ಆಧಾರ್, ಮೊಬೈಲ್ ಹಾಗೂ ಪಡಿತರ ಚೀಟಿ ಸಂಖ್ಯೆ ಜೋಡಣೆ ಮಾಡಲು ಮನವಿ

ರಾಯಚೂರು,ಡಿ.04:- ರಾಜ್ಯ ಸರ್ಕಾರದ ಇಂಧನ ಇಲಾಖೆಯ ಸೌಲಭ್ಯಗಳನ್ನು ಪಡೆಯಲು ಎಲ್ಲ ವಿದ್ಯುತ್ ಗ್ರಾಹಕರ ಆಧಾರ್ ಕಾರ್ಡ್, ಮೊಬೈಲ್ ಮತ್ತು ಪಡಿತರ ಚೀಟಿ ಸಂಖ್ಯೆಯನ್ನು ತಮ್ಮ ಸ್ಥಾವರದ ಸಂಖ್ಯೆಗೆ ಜೋಡಣೆ ಮಾಡುವಂತೆ ಕೋರಲಾಗಿದೆ.
ಆಧಾರ್, ಮೊಬೈಲ್ ಹಾಗೂ ಪಡಿತರ ಚೀಟಿ ಸಂಖ್ಯೆಯನ್ನು ಪಡೆಯಲು ಇಲಾಖೆಯ ಮೀಟರ್ ರೀಡರ್ ಮತ್ತು ನೌಕರರು ಮನೆಗೆ ಬಂದು ಮಾಹಿತಿ ಪಡೆಯಲಿದ್ದಾರೆ. ಈ ನಿಟ್ಟಿನಲ್ಲಿ ನಗರದ ಎಲ್ಲ ವಿದ್ಯುತ್ ಗ್ರಾಹಕರು ಆಧಾರ್, ಮೊಬೈಲ್ ಹಾಗೂ ಪಡಿತರ ಚೀಟಿ ಸಂಖ್ಯೆಯನ್ನು ಒದಗಿಸುವಂತೆ ಕೋರಲಾಗಿದೆ.
ಗ್ರಾಹಕರ ಮನೆಗಳಿಗೆ ನೌಕರರು ಆಗಮಿಸಿದ್ದಲ್ಲಿ ಯಾವುದೇ ಕಾರಣಗಳಿಂದ ಆಧಾರ್, ಮೊಬೈಲ್ ಹಾಗೂ ಪಡಿತರ ಚೀಟಿ ಸಂಖ್ಯೆಯನ್ನು ಒದಗಿಸಲು ಸಾಧ್ಯವಾಗದಿದ್ದರೆ ಸಂಬಂಧಿತ ಕಚೇರಿಗೆ ಬಂದು ನೀಡಬಹುದೆಂದು ಜೆಸ್ಕಾಂ ಕಾ ಮತ್ತು ಪಾ ನಗರ ವಿಭಾಗ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories