Crime

ರಾಯಚೂರು : ಆನ್‍ಲೈನ್ ಮೂಲಕ ನೋಂದಣಿಗೆ ಸೂಚನೆ

ರಾಯಚೂರು,ಡಿ.07 :- ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆ, ಪಾಲಿಕ್ಲಿನಿಕ್, ನರ್ಸಿಂಗ್ ಹೋಂ, ಕ್ಲಿನಿಕ್ (ಆಲೋಪತಿ ಮತ್ತು ಆಯುಷ್) ಲ್ಯಾಬ್ ಮತ್ತು ಡಯಗ್ನೋಸ್ಟಿಕ್‍ಗಳು ನೋಂದಣಿ, ನವೀಕರಣ ಮಾಡಿಕೊಳ್ಳದೆ ವೈದ್ಯ ವೃತ್ತಿ ನಡೆಸುತ್ತಿರುವ ವೈದ್ಯರುಗಳು ಆನ್‍ಲೈನ್‍ನಲ್ಲಿ ನೋಂದಾಯಿಸಿಕೊಳ್ಳಬೇಕು.
ರಾಯಚೂರು ಜಿಲ್ಲೆಯಲ್ಲಿ ಒಟ್ಟು 479 ಖಾಸಗಿ ಸಂಸ್ಥೆಗಳು ಕೆಪಿಎಂಇ ಕಾಯ್ದೆ ಅಡಿಯಲ್ಲಿ ನೋಂದಾಣೆಯಾಗಿದ್ದು, ಈ ಸಂಸ್ಥೆಗಳಲ್ಲಿ ಸುಮಾರು 155 ಖಾಸಗಿ ಆಸ್ಪತ್ರೆ, ಪಾಲಿಕ್ಲಿನಿಕ್, ನರ್ಸಿಂಗ್ ಹೋಂ, ಕ್ಲೀನಿಕ್ (ಆಲೋಪತಿ ಮತ್ತು ಆಯುಷ್) ಲ್ಯಾಬ್ ಮತ್ತು ಡಯಗ್ನೋಸ್ಟಿಕ್‍ಗಳು ನವೀಕರಣ ಮಾಡಿಕೊಂಡಿರುವುದಿಲ್ಲ.
ಜಿಲ್ಲಾಧಿಕಾರಿಗಳು ಸೂಚನೆಯಂತೆ ಜಿಲ್ಲೆಯ ಎಲ್ಲ ಖಾಸಗಿ ಸಂಸ್ಥೆಗಳು ಕೆಪಿಎಂಇ ಕಾಯ್ದೆ ಅಡಿಯಲ್ಲಿ ನವೀಕರಣ ಮಾಡದಿರುವ ಮತ್ತು ನೂತನ ಖಾಸಗಿ ಸಂಸ್ಥೆಗಳು 7 ದಿನದೊಳಗಾಗಿ ಆನ್‍ಲೈನ್ ಮೂಲಕ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು, ಒಂದು ವೇಳೆ ನೋಂದಾಯಿಸಿಕೊಳ್ಳದೆ ಮತ್ತು ನವೀಕರಣ ಹೊಂದದೆ ವೈದ್ಯವೃತ್ತಿ ನಡೆಸುತ್ತಿರುವುದು ಕಂಡುಬಂದಲ್ಲಿ ಅಂತಹ ಖಾಸಗಿ ಸಂಸ್ಥೆಯ ಮೇಲೆ ಕೆಪಿಎಂಇ ಕಾಯ್ದೆಯಡಿ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ಕೆಪಿಎಂಇ ಜಿಲ್ಲಾ ಸಮಿತಿ ಸದಸ್ಯ ಕಾರ್ಯದರ್ಶಿಗಳೂ ಆಗಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button