Bidar

ಬೀದರ್ ಉತ್ತರ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ 5124 ಮುಸ್ಲಿಂ ಹೆಸರುಗಳು ಕಾಣೆ!

ಬೀದರ್, ಕರ್ನಾಟಕ: ಬೀದರ್ ಉತ್ತರ ಕ್ಷೇತ್ರದ ವಿಶ್ಲೇಷಣೆ-ಮತದಾರರ ಪಟ್ಟಿಗಳ ಪ್ರಕಾರ, 2023 ರ ಪಟ್ಟಿಯಲ್ಲಿ ಕಾಣೆಯಾದ ಮತದಾರರು ಮುಸ್ಲಿಂ ಬಹುಸಂಖ್ಯಾತ ವಾರ್ಡ್‌ಗಳಲ್ಲಿ 5124 ಎಂದು ಗುರುತಿಸಲಾಗಿದೆ. ಈ ವಾರ್ಡ್‌ಗಳಲ್ಲಿನ ಒಟ್ಟು ಜನಸಂಖ್ಯೆ 81786 ಆಗಿರುತ್ತದೆ.

 ವೆಲ್ಫೇರ್ ಪಾರ್ಟಿಯ ಜಿಲ್ಲಾಧ್ಯಕ್ಷ ಮುಬಾಶಿರ್ ಸಿಂಧೆ ಅವರೊಂದಿಗೆ ಈ ಕುರಿತು ಮಾತನಾಡಿದಾಗ, ಸ್ಥಳೀಯರೆಲ್ಲರ ಬಳಿ ವೋಟರ್ ಐಡಿ, ಆಧಾರ್ ಕಾರ್ಡ್ ನಂತಹ ಪ್ರತಿಯೊಂದು ದಾಖಲೆ ಇದೆ. ಆದರೆ ಹಿಂದುಳಿದ ವರ್ಗದ ಜನರು ಕೂಲಿ ಕಾರ್ಮಿಕರಾಗಿದ್ದು, ಅವರ ಹೆಸರುಗಳು ಸರಿಯಾದ ಸ್ಥಳದಲ್ಲಿ ಇರುವುದಿಲ್ಲ. ಇನ್ನೊಂದು ಕಾರಣವೆಂದರೆ ವೋಟರ್ ಐಡಿಗೆ ಆಧಾರ್ ಲಿಂಕ್ ಆಗಿರುತ್ತದೆ. ವಯಸ್ಸಿನ ಸಮಸ್ಯೆಗಳು, ಅರಿವಿನ ಕೊರತೆ, ಆಸಕ್ತಿಯ ಕೊರತೆ ಮತ್ತು ಯಾವುದೇ ಜಾಗೃತಿ ಅಭಿಯಾನವನ್ನು ರಾಜಕೀಯ ಪಕ್ಷಗಳು ನಡೆಸಿಲ್ಲ ಈ ಕಾರಣಕ್ಕಾಗಿ ಬಿಟ್ಟು ಹೋಗಿರುವ ಸಾಧ್ಯತೆಯಿದೆ‌

ರಾಜಕೀಯ ಕಾರ್ಯಕರ್ತ ಸರ್ಫರಾಜ್ ಹಶ್ಮಿ ಮಾತನಾಡಿ, ಒಂದೇ ವ್ಯಕ್ತಿಯ ಎರಡು ಬಾರಿ ಹೆಸರು ತಪ್ಪಿದ ಮತಗಳ ಸಂಖ್ಯೆ ಕಡಿಮೆಯಾಗಿದೆ. ನಿರ್ದಿಷ್ಟ ವೋಟ್ ಬ್ಯಾಂಕ್ ತೆಗೆದುಹಾಕಲಾಗಿದೆ.ನೊಂದಾಯಿಸಲು ಜನಾಸಕ್ತಿ ಕೂಡ ಕಡಿಮೆಯಿದೆ. ಹಿಂದುಳಿದ ವರ್ಗಗಳಲ್ಲಿ ಈ ಕುರಿತು ಶಿಕ್ಷಣವಿಲ್ಲ. ಅಲ್ಲದೆ, ಅದನ್ನು ಹೇಗೆ ಏರಿಸಬೇಕು ಎಂಬುದು ಪ್ರಸ್ತುತ ನಾಯಕತ್ವದ ಕೈಯಲ್ಲಿದೆ.

ಈ ಹಿಂದೆ ಅಬ್ದುಲ್ ಮನ್ನನ್ ಸೇಟ್ (ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ) “ನಮ್ಮ ಸೋಮಾರಿತನದ ಜೊತೆಗೆ, ಮುಸ್ಲಿಮರ ರಾಜಕೀಯ ಸ್ಥಾನಮಾನವನ್ನು ತೊಡೆದುಹಾಕಲು ಮತ್ತು ಅವರ ಪ್ರಾತಿನಿಧ್ಯವನ್ನು ಶೂನ್ಯಕ್ಕೆ ತಗ್ಗಿಸಲು ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ” ಎಂದು ಆರೋಪಿಸಿದ್ದರು.

ಈ ದೃಷ್ಟಿಕೋನಗಳ ಪ್ರಕಾರ, ಜನರಲ್ಲಿ ಅರಿವಿನ ಕೊರತೆಯು ಪ್ರಮುಖ ವಿಷಯವಾಗಿದೆ ಎಂದು ಹೇಳಬಹುದು ಆದರೆ ರಾಜಕೀಯ ಪಕ್ಷಗಳು ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯಗಳ ನಾಯಕರು ಯಾವುದೇ ಪ್ರಚಾರ ಅಥವಾ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿಲ್ಲ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button