
Crime
ರಸ್ತೆ ಬದಿ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಚಾಕು ತೋರಿಸಿ ದರೋಡೆ
ಬೆಂಗಳೂರು, ಜ.4 (ಯುಎನ್ಐ) ರಸ್ತೆ ಬದಿ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಚಾಕು ತೋರಿಸಿ ಅವರಿಂದ 25 ಗ್ರಾಂ ತೂಕದ ಚಿನ್ನದ ಸರ ದರೋಡೆ ಮಾಡಿದ ಪ್ರಕರಣ ಓಕಳಿಪುರಂ ಬಳಿ ನಡೆದಿದೆ.
ಮೈಸೂರು ಮೂಲದ ಪುನೀತ್ ಚಿನ್ನದ ಸರ ಕಳೆದುಕೊಂಡವರು. ಅವರು ನಿನ್ನೆ ತನ್ನ ಪತ್ನಿಯನ್ನು ಬಸವೇಶ್ವರನಗರದಲ್ಲಿರುವ ಆಕೆಯ ತವರು ಮನೆಗೆ ಬಿಟ್ಟು ತಮ್ಮೊಂದಿಗೆ ಬಂದಿದ್ದ ಸ್ನೇಹಿತ ಮನು ಎಂಬುವರನ್ನು ಮಹದೇವಪುರದಲ್ಲಿರುವ ಆತನ ಮನೆಗೆ ಬಿಟ್ಟು ಬರಲು ಇನೋವಾ ಕಾರಿನಲ್ಲಿ ರಾತ್ರಿ ಹೋಗುತ್ತಿದ್ದರು.
ಈ ನಡುವೆ ಓಕಳಿಪುರಂ ಕೆಳ ಸೇತುವೆ ಬಳಿ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆಗೆ ಹೋಗಿದ್ದಾಗ ಅಲ್ಲಿಗೆ ಆ್ಯಕ್ಟಿವಾ ಹಾಗೂ ಡಿಯೋದಲ್ಲಿ ಬಂದ ಅಪರಿಚಿತರು ಪುನೀತ್ ಅವರನ್ನು ಹೆದರಿಸಿ ದರೋಡೆ ಮಾಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಮನು ಆರೋಪಿಗಳನ್ನು ಪ್ರಶ್ನಿಸಿದ್ದಾರೆ.




