
ಕಮಿಷನ್ ಆಸೆಗೆ ಕಣ್ಮುಚ್ಚಿ ಕುಳಿತರಾ ಅಧಿಕಾರಿಗಳು…!?ರಾಜಾರೋಷವಾಗಿ ನಡೆಯುತ್ತಿದೆ ಅಕ್ರಮ ಮರಳು ದಂಧೆ
ಭಾಗ : ೦೧
ವರದಿ : ಹಣಮಂತ ದೇಶಮುಖ್
ಔರಾದ : ರಸ್ತೆ ಉದ್ದಕ್ಕೂ ತಗ್ಗು ದಿನ್ನೆಗಳು ಈ ರಸ್ತೆಯಲ್ಲಿ ಒಂದು ಸಲ ಸಂಚರಿಸಿದರೆ ನರಕಯಾತನೆ ಅನುಭವ ಖಚಿತ. ಇದು ತೆಲಂಗಾಣ ದೊಂದಿಗೆ ಸಂಪರ್ಕ ಕಲ್ಪಿಸುವ ಕರಂಜಿ ಬಿ ಗ್ರಾಮದ ರಸ್ತೆಯ ದುಸ್ಥಿತಿ.
ಈ ರಸ್ತೆಯಲ್ಲಿ ಸಂಚರಿಸಿದರೆ ಸಾಕು ನೂರಾರು ಮರಳು ತುಂಬಿಕೊಂಡು ನಿಂತ ಲಾರಿಗಳು ಕಣ್ಣಿಗೆ ಬೀಳುತ್ತವೆ. ತೆಲಂಗಾಣದ ಬಿಚಕುಂದಾ – ಶಿವಪುರ- ಕರಂಜಿ – ಔರಾದ ರಸ್ತೆಯಲ್ಲಿ ಎದುರು ವಾಹನಗಳು ಬಂದರೆ ಅಪಘಾತ ತಪ್ಪಿದ್ದಲ್ಲ. ಇನ್ನೂ ಲಾರಿಯಲ್ಲಿ ನಿಯಮಕ್ಕೂ ಅಧಿಕ ಮರುಳು ತರುವುದರಿಂದ ರಸ್ತೆ ಸಂಪೂರ್ಣ ಹಾಳಾಗಿದೆ.

ರಾಯಲ್ಟಿ ಕಟ್ಟದೆ ಮರಳು
ಕೆಲವರು ಮರಳಿಗೆ ರಾಯಲ್ಟಿ ಕಟ್ಟದೆ ನಿತ್ಯ ಅಕ್ರಮ ಮರಳು ಲಾರಿಗಳಲ್ಲಿ ನಿಯಮಕ್ಕೂ ಹೆಚ್ಚು ಮರಳು ಸಾಗಣೆ ಮಾಡುತ್ತಿದ್ದರೆ, ಇನ್ನು ಕೆಲವರು ಲಾರಿಗಳ ಪೇಪರ್ ಇಲ್ಲದೆ ,ನಂಬರ್ ಪ್ಲೇಟ್ಸ್ ಬದಲಾಯಿಸಿ ಮರಳು ಸಾಗಣೆ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ ಇದರಿಂದ ರಸ್ತೆ ಸಂಪೂರ್ಣ ಹಾಳಾಗುತ್ತದೆ.
ಪಿಡಬ್ಲ್ಯೂಡಿ ವಿರುದ್ಧ ಆಕ್ರೋಶ
ಈ ರಸ್ತೆಯ ಮೇಲೆ ಅಕ್ರಮವಾಗಿ ಭಾರಿ ಪ್ರಮಾಣದ ಮರಳು ಲಾರಿಗಳು ಸಂಚರಿಸಿದರೇ ಪಿಡಬ್ಲ್ಯುಡಿ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಣಿದ್ದು ಕುರುಡರಂತೆ ಇದೆ ರಸ್ತೆ ಮೇಲೆ ಸಂಚರಿಸುತ್ತಾರೆ.
ಆದರೆ ಮರಳು ಲಾರಿಗಳ ಮೇಲೆ ಯಾವುದೇ ಕ್ರಮ ಜರುಗಿಸುವುದಿಲ್ಲ ಎಂದು ಸಾರ್ವಜನಿಕರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಮೇಲೆ ಹಿಡಿಶಾಪ ಹಾಕುತ್ತಿದ್ದಾರೆ.
ಕ್ರಮಕ್ಕೆ ಮುಂದಾಗದ ಅಧಿಕಾರಿಗಳು
ಸರ್ಕಾರದ ಸಭೆಯಲ್ಲಿ ರಸ್ತೆಗಳ ಬಗ್ಗೆ ಮಾತನಾಡಿದರೆ ಭಾರೀಗಾತ್ರದ ವಾಹನಗಳ ಓಡಾಟದ ಸಬೂಬು ಹೇಳುವ ಲೋಕಪಯೋಗಿ ಇಲಾಖೆ ಭಾರಿ ವಾಹನಗಳ ಮೇಲೆ ಯಾಕೆ ಕ್ರಮ ಜರುಗಿಸುತ್ತಿಲ್ಲ ಎಂಬ ಸಂಶಯಕ್ಕೆ ಕಾರಣವಾಗುತ್ತಿದೆ. ರಸ್ತೆ ಪರಿಸ್ಥಿತಿ ಶೋಚನೀಯವಾಗಿದೆ ನಿತ್ಯ ಮರಳು ಲಾರಿಗಳು ಸಂಚರಿಸುತ್ತಿವೆ ಆದರೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ
ಗ್ರಾಮಸ್ಥರ ಹಿಡಿಶಾಪ
ರಸ್ತೆ ದುಸ್ಥಿತಿ ಕಂಡು ಕರಂಜಿ ಬಿ, ರಾಯಪಲ್ಲಿ ನಾಗಮಾರಪಳ್ಳಿ ಗ್ರಾಮಸ್ಥರು ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ, ಇನ್ನು ಅಭಿವೃದ್ಧಿಪರ ಮಂತ್ರ ಜಪಿಸುವ ಜನಪ್ರತಿನಿಧಿಗಳು ಯಾಕೆ ರಸ್ತೆ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎನ್ನುವುದಕ್ಕೆ ಸಮರ್ಪಕ ಉತ್ತರ ಮಾತ್ರ ಸಿಗುತ್ತಿಲ್ಲ, ರಸ್ತೆಯ ವೃದ್ಧಿಪಡಿಸಿದೆ ಹೋದಲ್ಲಿ ಹೋರಾಟ ಅನಿವಾರ್ಯ ಎನ್ನುತ್ತಾರೆ ಆಸುಪಾಸಿನ ಊರಿನ ಗ್ರಾಮಸ್ಥರು
ಪ್ರತಿಭಟನೆಗೆ ಸಿದ್ಧವಾದ ಕರವೇ
“ಶಿವಪುರ – ಕರಂಜಿ – ಔರಾದ ರಸ್ತೆಯಲ್ಲಿ ಅಕ್ರಮ ಮರಳು ಲಾರಿಗಳು ಸಂಚರಿಸುತ್ತಿದ್ದರೆ, ಕ್ರಮ ಕೈಗೊಳ್ಳುವ ಅಧಿಕಾರಿಗಳು ಸುಮ್ಮನೆ ಇರುವುದು ಸಂಶಯಕ್ಕೆ ಎಡೆ ಮಾಡಿಕೊಡುತ್ತಿದೆ, ಅಲ್ಲದೆ ಈ ಭಾಗದ ರಸ್ತೆ ಸಂಪೂರ್ಣ ಹಾಳಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮರಳು ಲಾರಿಗಳು ಸಂಚರಿಸಿದಂತೆ ನೋಡಿಕೊಳ್ಳಬೇಕು, ಅಲ್ಲದೆ ರಸ್ತೆ ದುರಸ್ತಿಗೆ ಕ್ರಮ ಜರಗಿಸಬೇಕು ಇಲ್ಲವಾದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ವಿರುದ್ಧ ರಸ್ತೆತಡೆ ಚಳವಳಿ ನಡೆಸಲಾಗುತ್ತದೆ.”
ಅನಿಲ್ ಹೆಡೆ ತಾಲ್ಲೂಕು ಅಧ್ಯಕ್ಷರು ಕರವೇ ನಾರಾಯಣ ಗೌಡ ಬಣ ಔರಾದ
ಮುಂದಿನ ಸಂಚಿಕೆ
ಭಾಗ :೦2
ಮರಳು ಲಾರಿ ತಡೆದು ರಸ್ತೆ ದುರಸ್ತಿಗೆ ಆಗ್ರಹ
ಚೆಕ್ ಪೋಸ್ಟ್ ಸ್ಥಾಪಿಸಿ
ಅಕ್ರಮ ಮರಳು ವಾರದೊಳಗೆ ಕಡಿವಾಣ ಹಾಕಿ




