Featured StoryDakshina Kannada

ಖಾಸಗಿ ಆಸ್ಪತ್ರೆಯ ಉದ್ಯಮಿ ಲಾಬಿಗಳ ಸ್ವಾರ್ಥ ಮತ್ತು ನಿರ್ಲಕ್ಷ್ಯತನಕ್ಕೆ ತನ್ನ ಕಾಲನ್ನು ಕಳೆದುಕೊಂಡ ನೌಷಾದ್ ಕುರ್ನಾಡುರವರ ಮನೆಗೆ ಭೇಟಿ ನೀಡಿದ ವೆಲ್ಫೇರ್ ಪಕ್ಷದ (W.P.I.) ನಿಯೋಗದಿಂದ ನೈತಿಕ ಬೆಂಬಲ

ಮಂಗಳೂರು, ಮಾ. 13: ಅಪಘಾತವೊಂದರಲ್ಲಿ ಕಾಲಿನ ಮೂಳೆ ಮುರಿತಗೊಂಡು ಚಿಕಿತ್ಸೆಗಾಗಿ ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ವತಿಯ ಖಾಸಗಿ ಆಸ್ಪತ್ರೆಯನ್ನು ಸಂಪರ್ಕಿಸಿದ ಯುವಕ ನೌಶಾದ್ ನ ಕಥೆ ಬಹಳ ಕರುಣಾಜನಕವಾಗಿದೆ.
ಅಪಘಾತವೊಂದರಲ್ಲಿ ಸಂಭವಿಸಿದ ಕಾಲಿನ ಗಾಯಕ್ಕೆ ಚಿಕಿತ್ಸೆಗೆಂದು ಸದ್ರಿ ಆಸ್ಪತ್ರೆಯಲ್ಲಿ ದಾಖಲಾದ ಈ ಸಂತ್ರಸ್ತ ನೌಷಾದ್ ಕುರ್ನಾಡುರವರಿಗೆ ಸಕಾಲದಲ್ಲಿ ಸಮರ್ಪಕ ಚಿಕಿತ್ಸೆ ನೀಡದೆ ಇದ್ದುದರಿಂದ ಉಲ್ಬಣಿಸಿದ ಸಮಸ್ಯೆಯಿಂದಾಗಿ ಮುಂದೆ ಅವರು ತಮ್ಮ ಕಾಲನ್ನೇ ತುಂಡರಿಸಬೇಕಾದ ಅನಿವಾರ್ಯತೆಗೆ ಒಳಗಾಗುತ್ತಾರೆ. ಆಸ್ಪತ್ರೆಯ ವೈದ್ಯರ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ತನ್ನ ಕಾಲನ್ನು ಕಳೆದುಕೊಳ್ಳಬೇಕಾಗಿ ಬಂದ ಇವರಿಗೆ ಸ್ಥಳೀಯ ಶಾಸಕರ ಮಧ್ಯ ಪ್ರವೇಶದಿಂದಾಗಿ ಆಸ್ಪತ್ರೆಯ ಆಡಳಿತ ಮಂಡಳಿ ಸೂಕ್ತ ಪರಿಹಾರ ನೀಡುವ ಭರವಸೆಯನ್ನು ನೀಡಿದ್ದರಾದರೂ, ಕೊನೆಗೆ ಈ ಖಾಸಗಿ ಉದ್ಯಮದ ಅಧಿಕೃತರು ತಮ್ಮ ವಾಗ್ದಾನವನ್ನುಳಿಸದೆ ಅದಕ್ಕೆ ನಾವು ಕಾರಣರಲ್ಲ ಎಂದು ಜಾರಿಕೊಳ್ಳಲು ಯತ್ನಿಸಿದ ಘಟನೆ ಸಂಭವಿಸಿದ್ದು ಇದನ್ನು ಖಂಡಿಸಿ ಹೋರಾಡಲು ಪ್ರಮುಖವಾಗಿ ಡಿ. ವೈ.ಎಫ್. ಐ. ಸಹಿತ ಕೆಲವು ಸಾಮಾಜಿಕ ಸಂಘಟನೆಗಳು ಮುಂದೆ ಬಂದಾಗ ಅವರು ಮತ್ತೆ ಎಚ್ಚೆತ್ತುಕೊಂಡಿದ್ದರು. ಆದರೂ ಇದುವರೆಗೂ ಸಂತ್ರಸ್ತನಿಗೆ ಯಾವುದೇ ರೀತಿಯ ಪರಿಹಾರವೂ ದೊರೆತಿಲ್ಲ ಎಂಬ ಮಾಹಿತಿಯನ್ನು ಪಡೆದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ನಿಯೋಗವು ಅವರನ್ನು ಭೇಟಿ ಮಾಡಿ ಸಾಂತ್ವನ ನೀಡಿದ್ದಲ್ಲದೆ ಅವರ ಹೋರಾಟವನ್ನು ಎಲ್ಲಾ ರೀತಿಯಲ್ಲಿ ಬೆಂಬಲಿಸಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಭರವಸೆಯನ್ನು ನೀಡಿತು.


ಮಾತ್ರವಲ್ಲದೆ, ನೌಶಾದ್ ರವರ ಆರ್ಥಿಕ ಆದಾಯದ ಮೂಲಕ ಬದುಕಿನ ನಿರ್ವಹಣೆ ಮಾಡುತ್ತಿದ್ದ ಅವರ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ, ಮತ್ತು ಖಾಸಗಿ ಆಸ್ಪತ್ರೆಯ ವೈದ್ಯರು ತಮ್ಮ ನಿರ್ಲಕ್ಷ್ಯತೆಯಿಂದಾಗಿ ಬಡ ವ್ಯಕ್ತಯೊಬ್ಬನು ತನ್ನ ಕಾಲನ್ನು ಕಳೆದುಕೊಳ್ಳುವಂತೆ ಮಾಡಿದ ಅಸ್ಪತ್ರೆಯ ಅಡಳಿತ ಮಂಡಳಿಯ ಅನ್ಯಾಯದ ವಿರುಧ್ಧ ಮಾರ್ಚ್ 14 ರಂದು ದೇರಳಕಟ್ಟೆಯಲ್ಲಿ ಡಿ. ವೈ.ಎಫ್.ಐ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನಾ ಧರಣಿಯಲ್ಲಿಯೂ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಕಾರ್ಯಕರ್ತರು ಪಾಲ್ಗೊಳ್ಳಲು ನಿರ್ಧರಿಸಿರುವುದಾಗಿ ವೆಲ್ಫೇರ್ ಪಕ್ಷ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.


ವೆಲ್ಫೇರ್ ಪಕ್ಷದ ಉಳ್ಳಾಲ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ಅಬ್ದುಸ್ಸಲಾಮ್ . ಸಿ.ಎಚ್.ರವರ ನೇತೃತ್ವದಲ್ಲಿ ಸಂತ್ರಸ್ತರ ಮನೆಗೆ ಭೇಟಿ ನೀಡಿದ WPI ತಂಡದಲ್ಲಿ ಪಕ್ಷದ ದ. ಕ. ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸೈಫ್,ಉಳ್ಳಾಲ ವಿಧಾನ ಸಭಾ ಕ್ಷೇತ್ರದ ಕಾರ್ಯದರ್ಶಿ ಫಾರೂಕ್ ಅಲೇಕಲ ,ಉಳ್ಳಾಲ ನಗರ ಸಮಿತಿಯ ಕಾರ್ಯದರ್ಶಿ ಅಶ್ರಫ್ ಅಝೀಝ್,ಕೋಶಾಧಿಕಾರಿ ಹುಸೈನ್ ತೊಕ್ಕೊಟು,ಹನೀಫ್ ತಲಪಾಡಿ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button