
Featured StoryKodagu
ಕೊಡಗು | ಮದುವೆಯಾದ ಮೂರನೇ ದಿನಕ್ಕೆ ಮಡದಿಯ ಕೊಲೆ: ದಲಿತೆ ಎಂಬ ಕಾರಣಕ್ಕೆ ಕೊಲೆ – ಪೋಷಕರ ಆರೋಪ
ಕೊಡಗು: ಮದುವೆಯಾದ ಮೂರನೇ ದಿನಕ್ಕೆ ಮಡದಿಯ ಕೊಲೆಯಾಗಿದ್ದು ದಲಿತೆ ಎಂಬ ಕಾರಣಕ್ಕೆ ವಿವಾಹಿತೆಯನ್ನಿ ಕೊಲೆ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಕುಶಾಲನಗರ ತಾಲೂಕು ಹೆಬ್ಬಾಲೆ ಗ್ರಾಮದಲ್ಲಿ ಘಟನೆ ವರದಿಯಾಗಿದೆ. ಅಕ್ಷಿತಾ (೧೮) ಕೊಲೆಯಾದ ಯುವತಿ.
ಪತಿ ಹೇಮಂತ್ ಹಾಗು ಮನೆಯವರಿಂದ ಕೃತ್ಯ ನಡೆದಿದೆ. ದಲಿತಳು ಎಂಬ ಕಾರಣಕ್ಕೆ ಕೊಲ್ಲಲಾಗಿದೆಯೆಂದು ಅಕ್ಷಿತಾಳ ಪೋಷಕರು ಆರೋಪಿಸಿದ್ದಾರೆ. ಮಂಗಳವಾರ ಮದ್ಯಾಹ್ನ ಕೃತ್ಯ ನಡೆದಿದೆ.
ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮರೋಣತ್ತರ ಪರೀಕ್ಷೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಯುವತಿಯ ಮೃತದೇಹ ರವಾನೆ ಮಾಡಲಾಗಿದೆ.




