Bidar

ಭಾರತೀಯ ಜನತಾ ಪಾರ್ಟಿ ಬೀದರ್ ದಕ್ಷಿಣ ಮಂಡಲದ ವತಿಯಿಂದ ಕಮಠಾಣದಲ್ಲಿ ಪ್ರಣಾಳಿಕೆ ಸಲಹಾ ಸಂಗ್ರಹ ಅಭಿಯಾನಕ್ಕೆ ಚಾಲನೆ

ಬೀದರ್: ಬೀದರ್ ತಾಲ್ಲೂಕಿನ ಕಮಠಾಣದಲ್ಲಿ ಭಾರತೀಯ ಜನತಾ ಪಾರ್ಟಿ ಬೀದರ್ ದಕ್ಷಿಣ ಮಂಡಲದ ವತಿಯಿಂದ ಪ್ರಣಾಳಿಕೆ ಸಲಹಾ ಸಂಗ್ರಹ ಅಭಿಯಾನಕ್ಕೆ ಅಭೂತಪೂರ್ವ ಚಾಲನೆ ದೊರೆಯಿತು ಬಿಜೆಪಿ ಜಿಲ್ಲಾಧ್ಯಕ್ಷರಾದ ಶಿವಾನಂದ ಮಂಠಾಳಕರ್, ಅಭಿಯಾನ ಜಿಲ್ಲಾ ಸಂಚಾಲಕರಾದ ಗುರುನಾಥ್ ಜ್ಯಾಂತಿಕರ್, ಕೆ ಎಸ್ ಐ ಐ ಡಿ ಸಿ ಅಧ್ಯಕ್ಷರಾದ ಡಾ ಶೈಲೇಂದ್ರ ಬೆಲ್ದಾಳೆ, ಮಂಡಲದ ಅಧ್ಯಕ್ಷರಾದ ರಾಜರೆಡ್ಡಿ ಶಹಾಬಾದ್ ಅಭಿಯಾನಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶಿವಾನಂದ ಮಂಠಾಳಕರ್ ರವರು ಮಾತನಾಡಿ ಭಾರತೀಯ ಜನತಾ ಪಾರ್ಟಿ ವತಿಯಿಂದ ರಾಜ್ಯಾದ್ಯಂತ ಪ್ರಣಾಳಿಕೆ ಸಲಹಾ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು ಮುಂಬರುವ ವಿಧಾನಸಭಾ ಚುನಾವಣೆ ಪಕ್ಷದ ಪ್ರಣಾಳಿಕೆಗೆ ರಾಜ್ಯದ ಕಟ್ಟ ಕಡೆಯ ನಾಗರೀಕನ ಸಲಹೆಗಳನ್ನು ಪಡೆಯಲಾಗುತ್ತಿದೆ. ಪ್ರತಿ ಬೂತ್ ಮಟ್ಟದ ಮತದಾರರನ್ನು ಗಣನೆಗೆ ತೆಗೆದುಕೊಳ್ಳುವ ಮೂಲಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಪ್ರಣಾಳಿಕೆ ಸಿದ್ಧ ಪಡಿಸಲು ರಾಜ್ಯ ಬಿಜೆಪಿ ಮುಂದಾಗಿದೆ ಎಂದು ತಿಳಿಸಿದರು.

ಅಭಿಯಾನದ ಜಿಲ್ಲಾ ಸಂಚಾಲಕರಾದ ಗುರುನಾಥ್ ಜ್ಯಾಂತಿಕರ್ ರವರು ಮಾತನಾಡಿ ಪಕ್ಷದ ಆದೇಶ ಮೇರೆಗೆ ರಾಜ್ಯಾದ್ಯಂತ ಪ್ರಣಾಳಿಕೆ ಸಲಹಾ ಸಂಗ್ರಹ ನಡೆಯುತ್ತಿದ್ದು ಪ್ರತಿ ಮಹಾಶಕ್ತಿ ಕೇಂದ್ರಗಳಿಂದ ಪ್ರಣಾಳಿಕೆ ಸಲಹೆಗಳನ್ನು ಸಂಗ್ರಹಿಸಲಾಗುತ್ತಿದೆ. ಬೀದರ್ ದಕ್ಷಿಣ ಮಂಡಲದಿಂದ ಇಂದು ಚಾಲನೆ ದೊರಕಿದ್ದು ಪ್ರತಿ ಬೂತ್ ಮಟ್ಟದ ಮತದಾರ ಸಲಹೆ ಸಂಗ್ರಹಿಸಲು ಕಾರ್ಯಕರ್ತರು ಸಿದ್ಧರಾಗಿದ್ದಾರೆ ಇಲ್ಲಿನ ಕಾರ್ಯಕರ್ತರ ಉತ್ಸಾಹ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ವಿಜಯದ ಪತಾಕೆ ಹಾರಿಸಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ ಶೈಲೇಂದ್ರ ಬೆಲ್ದಾಳೆ ರವರು ಮಾತನಾಡಿ ಪಕ್ಷದ ಆದೇಶ ಮೇರೆಗೆ ರಾಜ್ಯಾದ್ಯಂತ ಪ್ರಣಾಳಿಕೆ ಸಲಹಾ ಸಂಗ್ರಹ ಅಭಿಯಾನ ನಡೆಯುತ್ತಿದ್ದು, ತಮ್ಮ ಇಚ್ಛೆಗೆ ತಕ್ಕಂತೆ ಉಚಿತ ಯೋಜನೆಗಳ ಮೂಲಕ ರಾಜ್ಯದ ಜನರ ದಿಕ್ಕು ತಪ್ಪಿಸುವ ವಿರೋಧ ಪಕ್ಷಗಳು ತಮ್ಮ ಏಳಿಗೆಗೆ ಯೋಜನೆಗಳನ್ನು ರೂಪಿಸುತ್ತಿದ್ದರೆ ಭಾರತೀಯ ಜನತಾ ಪಾರ್ಟಿ ರಾಜ್ಯದ ಪ್ರತಿಯೊಬ್ಬ ಕಟ್ಟ ಕಡೆಯ ವ್ಯಕ್ತಿ ಸಲಹೆಗಳನ್ನು ಪಡೆಯುವ ಮೂಲಕ ಜನರ ಅಭಿಪ್ರಾಯದಂತೆ ಪ್ರಣಾಳಿಕೆಯನ್ನು ಸಿದ್ಧಪಡಿಸುತ್ತಿದೆ. ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಈ ಬಾರಿ ಸಂಘಟನಾತ್ಮಕವಾಗಿ ಸರ್ವ ರೀತಿಯಿಂದ ಮುಂಬರುವ ವಿಧಾನಸಭಾ ಚುನಾವಣೆ ಎದುರಿಸಲು ಕಾರ್ಯಕರ್ತರು ಸಿದ್ಧರಾಗಿದ್ದಾರೆ. ಈ ಬಾರಿ ಕ್ಷೇತ್ರದ ಜನ ಯಾವುದೇ ಆಮೀಷಗಳಿಗೆ ಒಳಗಾಗದೇ ಅಭಿವೃದ್ಧಿಯ ಕೈ ಹಿಡಿಯಲಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಪ್ರಕಾಶ್ ಟೊಣ್ಣೆ,
ಅಭಿಯಾನ ಜಿಲ್ಲಾ ಸಂಚಾಲಕರಾದ ಗುರುನಾಥ್ ಜ್ಯಾಂತಿಕರ್, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಯ್ಯ ಸ್ವಾಮಿ, ಚೆನ್ನಪ್ಪ ಗೌರಶೆಟ್ಟಿ,ರಾಜಶೆಖರ್ ನಾಗಮೂರ್ತಿ, ಜಿಲ್ಲಾ ಕಾರ್ಯದರ್ಶಿ ಜಗನ್ನಾಥ್ ಬಿ ಪಾಟೀಲ್,ಹೇಮಾ ತುಕ್ಕಾರೆಡ್ಡಿ, ಶ್ರೀನಿವಾಸ ಪೊದ್ದಾರ್, ಶಿವರಾಜ್ ಕುದರೆ, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ, ಸುರೇಶ್ ಮಾಶೆಟ್ಟಿ, ನಿತಿನ್ ಕರ್ಪೂರ್,ಮನ್ಮಥ್ ಕಾಡವಾದ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button