Featured StoryState News

ನಾನು ಬೊಮ್ಮಾಯಿ ಅವರನ್ನು ಬೆಂಬಲಿಸುತ್ತೇನೆ – ನಟ ಸುದೀಪ್

ಬೆಂಗಳೂರು: ಕಷ್ಟ ಕಾಲದಲ್ಲಿ ನನ್ನ ಜೊತೆ ಕೆಲವರು ಇದ್ದರು. ಚಿತ್ರರಂಗಕ್ಕೆ ಬಂದಾಗ ಕೆಲವೇ ಕೆಲವರು ನನ್ನ ಪರ ನಿಂತಿದ್ದರು. ಕಷ್ಟದ ಸಮಯದಲ್ಲಿ ಸಿಎಂ ಬೊಮ್ಮಾಯಿ ಸಪೋರ್ಟ್​ ಮಾಡಿದ್ದಾರೆ. ಸಿಎಂ ಬೊಮ್ಮಾಯಿರನ್ನು ನಾನು ಚಿಕ್ಕಂದಿನಿಂದಲೂ ನೋಡಿದ್ದೇನೆ. ಸಿಎಂ ಬೊಮ್ಮಾಯಿಗೆ ನಾನು ಬೆಂಬಲ ಕೊಡಲು ಇಷ್ಟಪಡುತ್ತೇನೆ ಎಂದು ನಟ ಕಿಚ್ಚ ಸುದೀಪ್​ ಹೇಳಿದರು.

ನಾನು ರಾಜಕೀಯಕ್ಕೆ ಎಂಟ್ರಿಯಾಗುತ್ತಿಲ್ಲ ನಾನು ಬಸವರಾಜ್ ಬೊಮ್ಮಾಯಿ ಅವರಿಗೆ ಬೆಂಬಲಿಸುತ್ತೇನೆ ಎಂದು ಚಿತ್ರ ನಟ ಸುದೀಪ್ ಹೇಳಿದ್ದಾರೆ.

ನಿಮ್ಮ ಬೆಂಬಲ ಕೇಸರಿ ಶಾಲಿಗೋ, ಕಮಲಕ್ಕೊ ಅಥವಾ ಬಸವರಾಜ್ ಬೊಮ್ಮಾಯಿ ಅವರಿಗೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಸುದೀಪ್ ಪ್ರತಿಕ್ರಿಯಿಸಿ ನನ್ನಬೆಂಬಲ ಬಸವರಾಜ್ ಬೊಮ್ಮಾಯಿ ಅವರಿಗೆ ಎಂದು ಹೇಳಿದರು. ಈ ಮೂಲಕ ತಾನು ಸಕ್ರಿಯ ರಾಜಕೀಯಕ್ಕೆ ಹೋಗುವುದಿಲ್ಲ ಎಂದರು.

ಡಿಕೆ ಶಿವಕುಮಾರ್ ಅವರಿಗೆ ನನ್ನ ಬಗ್ಗೆ ತಿಳಿದಿದೆ. ಪ್ರಚಾರದ ಸಂದರ್ಭದಲ್ಲಿ ಚಿತ್ರ ನಟರಿಗೆ ಆಹ್ವಾನಿಸುವುದು ಸಾಮಾನ್ಯ ಎಂದು ಹೇಳಿದರು. ನಾನು ನಾಗರಿಕನಾಗಿ ಎಲ್ಲ ವಿಚಾರದಲ್ಲಿ ಒಪ್ಪಿಗೆ ಇರಬೇಕಾಗಿಲ್ಲ. ನಾನು ಮೋದಿಯ ಹಲವು ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದು ಅಡ್ಡ ಗೋಡೆಯ ಮೇಲೆ ದೀಪ ಇಟ್ಟ ಹಾಗೆ ಉತ್ತರಿಸಿದರು. ಭ್ರಷ್ಟಾಚಾರ ನಡೆದಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತೆ. ನನ್ನ ಬೆಂಬಲ ಒಳ್ಳೆಯ ವಿಚಾರಕ್ಕೆ ಎಂದರು.

ಐಟಿ,ಇಡಿ ಬ್ಲ್ಯಾಕ್’ಮೇಲ್ ಮಾಡಿ ನಿಮ್ಮ ಮೇಲೆ ಒತ್ತಡ ಹಾಕಲಾಗಿದೆಯೇ ಎಂದು ಪ್ರಶ್ನಿಸಿದಾಗ ಪ್ರೀತಿಗಾಗಿ ಬಂದಿದ್ದೇನೆ ಎಂದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button