Featured StoryUdupi

ಉಡುಪಿ: ಪಕ್ಷ ನನ್ನನ್ನು ನಡೆಸಿಕೊಂಡ ರೀತಿ ಸರಿ ಇಲ್ಲ ಎಂದು ಶಾಸಕ ರಘುಪತಿ ಭಟ್ ಕಣ್ಣೀರು

ಉಡುಪಿ: ಪಕ್ಷ ನನ್ನನ್ನು ನಡೆಸಿಕೊಂಡ ರೀತಿ ಸರಿ
ಇಲ್ಲ ,ಮೂರು ಬಾರಿಯ ಶಾಸಕ ನಾನು.ಪಕ್ಷದ ನಾಯಕರು
ಸೌಜನ್ಯಕ್ಕಾದರೂ ಸಂಪರ್ಕಿಸಿ ಹೇಳಬಹುದಿತ್ತು‌ ಎಂದು ಬಿಜೆಪಿ ಹಾಲಿ ಶಾಸಕ ರಘುಪತಿ ಭಟ್ ಅಳಲು ತೋಡಿಕೊಂಡಿದ್ದಾರೆ.

ಮೊದಲೇ ಟಿಕೆಟ್ ಸಿಗುವುದಿಲ್ಲ ಎಂದು ಗೊತ್ತಿದ್ದರೆ ಈಶ್ವರಪ್ಪ ರೀತಿ ಮಾಡುತ್ತಿದ್ದೆ. ನಾನು ಶಾಕ್ ಗೆ ಒಳಗಾಗಿದ್ದೇನೆ. ನನಗೆ ಜಾತಿ ಇಲ್ಲ ಎಂದು ಟಿಕೆಟ್ ವಂಚಿತ ಶಾಸಕ ರಘುಪತಿ ಭಟ್ ಕಣ್ಣೀರು ಹಾಕಿದ್ದಾರೆ.

ಪಕ್ಷದ ನಿರ್ಧಾರದ ಕುರಿತು ಬೇಸರವಿಲ್ಲ. ಈಗಿನ ಅಭ್ಯರ್ಥಿ ನಾವೇ ಬೆಳೆಸಿದ ಅಭ್ಯರ್ಥಿ ಅವರ ಬಗ್ಗೆ ಬೇಸರವಿಲ್ಲ. ಆದರೆ ನಡೆಸಿಕೊಂಡ ರೀತಿಯ ಬಗ್ಗೆ ಬೇಸರವಿದೆ. ಮೂರು ತಿಂಗಳ ಮುಂಚೆ ಈಶ್ವರಪ್ಪ ಅವರಿಗೆ ಮಾಡಿದ ಹಾಗೆ ನನಗೆ ಹೇಳಿದ್ದರೆ ನಾನು ಕೂಡ ಹಿಂದೆ ಸರಿಯುತ್ತಿದೆ ಎಂದು ಅತ್ತಿದ್ದಾರೆ.

ಕಾರ್ಯಕರ್ತರನ್ನು ನಡು ನೀರಿನಲ್ಲಿ ಬಿಡುವ ಪ್ರಶ್ನೆಯೇ ಇಲ್ಲ. ಯಾಕೆ ಹೀಗಾಯಿತು‌ ಎಂಬುದು ತುಂಬ ಬೇಸರ ತಂದಿದೆ. ನಾನು ಬೆಳೆಸಿದ ಹುಡುಗ ಇಂದು ಅಭ್ಯರ್ಥಿಯಾಗಿದ್ದು, ಅವರಿಗೆ ಶುಭಾಶಯ ಕೋರುತ್ತೇನೆ. ಅಭ್ಯರ್ಥಿ ಬಗ್ಗೆ ಯಾವುದೇ  ಆಕ್ಷೇಪವಿಲ್ಲ. ಉಡುಪಿಯಲ್ಲಿ ಪಾರ್ಟಿ ಕಟ್ಟಿದ್ದೇನೆ ಮತ್ತು ಬಿಜೆಪಿಯಿಂದ ಇಲ್ಲ ಯಾರು ನಿಂತರೂ ಗೆಲ್ಲಲಿದ್ದಾರೆ ಸ್ಥಿತಿ ನಿರ್ಮಾಣ ಮಾಡಿದ್ದೇನೆ. ಪಕ್ಷಕ್ಕೆ ಈಗ  ನನ್ನ ಅವಶ್ಯಕತೆ ಇಲ್ಲ ಎಂಬುದು ತೋರಿಸುತ್ತಿದ್ದಾರೆ. ಅಮಿತ್ ಶಾ ಬೇಡ, ರಾಜ್ಯ ನಾಯಕರು ಅಥವಾ ಜಿಲ್ಲಾಧ್ಯಕ್ಷರು ಕರೆ ಮಾಡದೇ ಇರುವುದು ಬೇಸರ ತಂದಿದೆ ಎಂದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button