
ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಿಗೆ ಸದ್ಯದಲ್ಲಿ ತಲೆ ಬೋಳಿಸಿಕೊಂಡು ಕುಳಿತುಕೊಳ್ಳುವ ಭಾಗ್ಯ ದೊರೆಯಲಿದೆ — ಸುರೇಶ್ ಶೆಟ್ಟಿ ಬನ್ನಂಜೆ
ಉಡುಪಿ ಜಿಲ್ಲೆಯ ಬಿಜೆಪಿಯ ಅಧ್ಯಕ್ಷರು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಬಗ್ಗೆ ಬಹಳ ಕೀಳಾಗಿ ಇದುವರೆಗೆ ಕಾಂಗ್ರೆಸ್ ಪಕ್ಷ ಯಾವುದನ್ನು ದೇಶದ ಜನರಿಗೆ ನೀಡಲಿಲ್ಲ ಎಂಬಂತ ಹೇಳಿಕೆಗಳನ್ನು ನೀಡಿ ನಮ್ಮ ಉಡುಪಿ ಜಿಲ್ಲೆಯ ಎಲ್ಲ ಜನ ರನ್ನು ಒಂದು ರೀತಿಯಲ್ಲಿ ಮೋಸ ಮಾಡುವಂತಹ ಹೇಳಿಕೆಗಳನ್ನು ನೀಡಿ ನಮ್ಮ ಜಿಲ್ಲೆಯ ಜನಸಾಮಾನ್ಯರನ್ನು ತಪ್ಪು ದಾರಿ ಗೆ ಎಳೆಯುತ್ತಿದ್ದಾರೆ.
ಮಾನ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷರೇ ಈ ಬಾರಿ ನೂರಕ್ಕೆ ನೂರು ಶೇಕಡ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ನಡೆಸುವುದು ನಿಶ್ಚಿತ.ಇದು ನಮ್ಮ ಕರ್ನಾಟಕ ರಾಜ್ಯದ ಎಲ್ಲ ಮತದಾರರ ಒಪ್ಪಿಗೆ ಮೂಲಕ ನಮ್ಮ ಪಕ್ಷ ಆಡಳಿತಕ್ಕೆ ಬಂದ ನಂತರ ಕಾಂಗ್ರೆಸ್ ಪಕ್ಷ ಏನು ಗ್ಯಾರೆಂಟಿ ನೀಡಿದೆ ಅದೆಲ್ಲವನ್ನು ಪೂರೈಸುತ್ತದೆ ನಮ್ಮ ಕಾಂಗ್ರೆಸ್ ಪಕ್ಷದ ನಾಯಕರು ನಿಮ್ಮ ಪಕ್ಷದ ರಾಷ್ಟ್ರೀಯ ನಾಯಕರಂತೆ ಮಹಾ ಸುಳ್ಳು ಗಾರ ರಲ್ಲ ರಾಜ್ಯದ ಬಿಜೆಪಿ ನಾಯಕರಂತೆ ಮಹಾನ್ ಲೂಟಿಕೋರರು ಅಲ್ಲ ಎಂಬುದು ಎಲ್ಲ ಬಿಜೆಪಿ ನಾಯಕರಿಗೆ ತಿಳಿದಿರಲಿ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರೇ ಕೇವಲ ಪ್ರಚಾರಕ್ಕಾಗಿ ಮಾತನಾಡುವುದನ್ನು ಬಿಟ್ಟು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಪಕ್ಷವು ಏನು ಗ್ಯಾರೆಂಟಿಯನ್ನು ನೀಡಿದೆ ಅದನ್ನುಸಂಪೂರ್ಣವಾಗಿ ಬರಿಸುತ್ತದೆ ಮಾನ್ಯ ಮೋದಿಯವರಂತೆ ಸುಳ್ಳು ಹೇಳುವ ಪಕ್ಷ ನಮ್ಮದಲ್ಲ ಎಂಬುದು ನಿಮಗೆ ನೆನಪಿರಲಿ ನಿಮಗೆ ತಾಕತ್ತಿದ್ದರೆ ಮುಂದಿನ ಐದು ವರ್ಷಗಳ ಕಾಲ ತಲೆಯನ್ನು ಬೋಳಿಸಿ ಕೊಂಡು ಇಡೀ ಜಿಲ್ಲೆಯಲ್ಲಿ ಸಂಚರಿಸಿ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ಅಧ್ಯಕ್ಷ ಸುರೇಶ್ ಶೆಟ್ಟಿ ಬನ್ನಂಜೆ ಸವಾಲೆಸೆದಿದ್ದಾರೆ.




