Featured StoryState News

ನಮ್ಮ ಗ್ಯಾರಂಟಿ ಆರು ತಿಂಗಳ ಒಳಗೆ ಅನುಷ್ಠಾನ ಮಾಡದೇ ಇದ್ದರೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ – ಯುಟಿ ಖಾದರ್

ಮಂಗಳೂರು: ಈ ಬಾರಿ ಬಿಜೆಪಿ ಸೋಲಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಗ್ಯಾರಂಟಿ. ನಮ್ಮ ಗ್ಯಾರಂಟಿ ನಾವು ಆರು ತಿಂಗಳ ಒಳಗೆ ಅನುಷ್ಠಾನ ಮಾಡದೇ ಇದ್ದರೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಮಾಜಿ ಸಚಿವ ಯುಟಿ ಖಾದರ್ (UT Khader)​​ ಹೇಳಿದ್ದಾರೆ.

ಮಂಗಳೂರಿನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಪಕ್ಷ ನಾಯಕರಿಗೆ ಸುಳ್ಳೇ ಬಂಡವಾಳ, ಅವರಲ್ಲಿ ಸತ್ಯ ಇಲ್ಲ. ಜನರ ನೋವು ಶಮನಗೊಳಿಸುವುದೇ ಕಾಂಗ್ರೆಸ್​ನ​ ಗ್ಯಾರಂಟಿ ಸ್ಕೀಂ. ಅಧಿಕಾರಕ್ಕೆ ಬಂದ ತಕ್ಷಣ 5 ಗ್ಯಾರಂಟಿಗಳನ್ನು ಈಡೇರಿಸುತ್ತೇವೆ. ಬಿಜೆಪಿ ಜಾತಿ, ಧರ್ಮದ ಹೆಸರಿನಲ್ಲಿ ಅಧಿಕಾರದ ಕನಸು ಕಾಣುತ್ತಿದೆ ಎಂದು ಕಿಡಿಕಾರಿದರು.

ಮತದಾರರು ಮತ್ತೆ ಬಿಜೆಪಿಗೆ ಅವಕಾಶ ಕೊಡಬಾರದು. ಕಾಂಗ್ರೆಸ್​ ಸಮಾಜಕ್ಕೆ ಪೂರಕವಾದ ಸಂಘಟನೆಗೆ ಪ್ರೋತ್ಸಾಹ ನೀಡುತ್ತೆ. ಸಮಾಜ ವಿರೋಧಿ, ಸಮಾಜಘಾತುಕ ಸಂಘಟನೆಗಳ ಮೇಲೆ ಕ್ರಮಕೈಗೊಳ್ಳಲಾಗುವುದು. ಮುಸ್ಲಿಂ ಮೀಸಲಾತಿ ವಿಚಾರ ಸದ್ಯ ಕೋರ್ಟ್​​ನಲ್ಲಿದೆ. ಮೇ 13ರಂದು ರಾಜ್ಯದಲ್ಲಿ ಬಿಜೆಪಿ ಭವಿಷ್ಯ ಮುಗಿಯಲಿದೆ. ಜೆಡಿಎಸ್​​ನವರಿಗೆ ಇಡೀ ಜಿಲ್ಲೆಯಲ್ಲಿ 2 ಸಾವಿರ ಮತ ಕೂಡ ಇಲ್ಲ. ಮುಖಭಂಗ ತಪ್ಪಿಸಿಕೊಳ್ಳಲು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button