
Featured StoryState News
ಡಿಕೆಶಿ ವಿರುದ್ಧ ದ್ವೇಷ ಸಾಧಿಸಲು ಪ್ರವೀಣ್ ಸೂದ್ ಅವರನ್ನು ಸಿಬಿಐ ನಿರ್ದೇಶಕರನ್ನಾಗಿ ಮಾಡಲಾಗಿದೆ – ಕಾಂಗ್ರೆಸ್ ಶಾಸಕ ಕೆ.ಎನ್ ರಾಜಣ್ಣ
ಬೆಂಗಳೂರು: ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಅವರನ್ನು ಸಿಬಿಐ ನಿರ್ದೇಶಕರಾಗಿ ಕೇಂದ್ರ ಸರಕಾರ ನೇಮಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಶಾಸಕ ಕೆ.ಎನ್ ರಾಜಣ್ಣ, ಡಿಕೆಶಿ ವಿರುದ್ಧ ದ್ವೇಷ ಸಾಧಿಸಲು ಅವರನ್ನು ಸಿಬಿಐ ನಿರ್ದೇಶಕರಾಗಿ ನೇಮಿಸಲಾಗಿದೆ ಎಂದಿದ್ದಾರೆ.
ಈ ಮುಂಚೆ ಕೆ.ಪಿ.ಸಿ.ಸಿ ಅಧ್ಯಕ್ಷರು ಪ್ರವೀಣ್ ಸೂದ್ ವಿರುದ್ಧ ಗುರುತರ ಆರೋಪ ಮಾಡಿದ್ದರು ಇದೀಗ ಅವರ ವಿರುದ್ಧ ದ್ವೇಷ ಸಾಧಿಸಲು ನೇಮಕ ಮಾಡಲಾಗಿದೆ ಎಂಬ ಮಾತನ್ನು ರಾಜಣ್ಣ ಹೇಳಿರುವುದು ಕುತೂಹಲ ಮೂಡಿಸಿದೆ.
ಡಿಕೆಶಿ ಪ್ರವೀಣ್ ಸೂದ್ ಅವರನ್ನು ನಾಲಯಕ್ ಎಂದು ಜರೆದಿದ್ದರು.




