Featured StoryState News

ಕೋಮು ಸೌಹರ್ದತೆಗೆ ದಕ್ಷಿಣ ಕನ್ನಡದಲ್ಲಿ ಮತ್ತೊಂದು ಹೆಸರು ಯುಟಿ ಕಾದರ್ – ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್

ಬೆಂಗಳೂರು: ಯುಟಿ ಖಾದರ್ ಅವರನ್ನು ವಿಧಾನಸಭೆಯ ಸ್ಪೀಕರ್ ಆಯ್ಕೆ ಸರ್ವಾನುಮತದಿಂದ ಆಯ್ಕೆ ಮಾಡಿದ ನಂತರ ಮಾತನಾಡಿದ ಡಿಕೆಶಿ, ದಕ್ಷಿಣ ಕನ್ನಡದಲ್ಲಿ ಕೋಮು ಸೌಹರ್ದತೆಗೆ ‌ಮತ್ತೊಂದು ಹೆಸರು ಯುಟಿ ಖಾದರ್ ಎಂದು ಅಭಿನಂದಿಸಿದರು.

ನಂತರ ಒಂದು ಉತ್ತಮ ವಿರೋಧ ಪಕ್ಷದ ಅಗತ್ಯವಿದೆ. ಅವರು ಬಲಿಷ್ಠರಾದಾಗ ನಾವು ತಪ್ಪು ಮಾಡದೆ ಸರಕಾರ ನಡೆಸಲು ಸಾಧ್ಯವಾಗುತ್ತದೆ. ಯಾವುದೇ ತಾರತಮ್ಯ ಇಲ್ಲದೆ ಎಲ್ಲ ಶಾಸಕರೊಂದಿಗೆ ಸಮಾನವಾಗಿ ವರ್ತಿಸಿ ನಿಮ್ಮ ಜವಾಬ್ದಾರಿ ನಿಭಾಯಿಸಿ ಎಂದು ಯುಟಿಕೆಗೆ ಡಿಕೆಶಿ ಸಲಹೆ ನೀಡಿದರು.

ಎಲ್ಲ ಸಮಾಜದೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದೀರಿ ಅದನ್ನು ಮರೆಯಲು ಸಾಧ್ಯವಿಲ್ಲ. ಹಲಾಲ್,ಹಿಜಾಬ್ ವಿವಾದದ ಸಂದರ್ಭದಲ್ಲೂ ನಿಮ್ಮ ಧೋರಣೆ ದೇಶದ ಮತ್ತು ಜನರ ಪರವಾಗಿತ್ತು ಎಂದರು. ನೀವು ನ್ಯಾಯಾಧೀಶರ ಸ್ಥಾನದಲ್ಲಿ ಕುಳಿತುಕೊಂಡಿದ್ದೀರಾ ಆ ಸ್ಥಾನದಲ್ಲಿ ಅನ್ಯಾಯವಾಗುವುದು ಬೇಡ ಎಂದು ಹಾರೈಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button