State NewsFeatured Story

ಐದು ಗ್ಯಾರಂಟಿ ಜಾರಿ ಮಾಡಿ ನುಡಿದಂತೆ ನಡೆದ ಸಿದ್ದರಾಮಯ್ಯ ಸರಕಾರ – ಗೊಂದಲದಲ್ಲಿದವರಿಗೆ ಮಾಸ್ಟರ್ ಸ್ಟ್ರೋಕ್ ನೀಡಿದ ಸಿದ್ದು!

ಬೆಂಗಳೂರು: ಎರಡನೇ ಕ್ಯಾಬಿನೆಟ್ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷದ ವತಿಯಿಂದ ಐದು ಗ್ಯಾರಂಟಿ ಘೋಷಣೆ ಮಾಡಿದ್ದೇವು. ಐದು ಗ್ಯಾರಂಟಿ ಘೋಷಣೆ ಮಾಡಿ ನಾನು ಮತ್ತು ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ಗ್ಯಾರಂಟಿ ಕಾರ್ಡ್ ಗೆ ರುಜು ಮಾಡಿದ್ದೇವು. ಈ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ಎಂದು ಮಾತು ನೀಡಿದ್ದೇವು. ಅದರಂತೆ ಕಾರ್ಯಕರ್ತರ ಮೂಲಕ ಗ್ಯಾರಂಟಿ ಕಾರ್ಡ್ ಎಲ್ಲರಿಗೂ ಹಂಚುವ ಕೆಲಸ ಮಾಡಿದ್ದೇವು. ವಿರೋಧ ಪಕ್ಷದವರು, ಮಾಧ್ಯಮದವರು ತಮಗೆ ಅನಿಸಿದ್ದು ಊಹಾಪೋಹಗಳನ್ನು ಮಾಡಿದ್ದೀರಿ. ಆದರೆ ಕ್ಯಾಬಿನೆಟ್ ನಿರ್ಧಾರ ನಿಮಗೆ ನಾವು ತಿಳಿಸುತ್ತೇವೆ ಎಂದರು.

ಮೊದಲ ಕ್ಯಾಬಿನೆಟ್ ನಲ್ಲೆ ನಾವು ಐದು ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದು ಹೇಳಿ ಆದೇಶ ಹೊರಡಿಸಿದ್ದೇವೆ. ಇವತ್ತು ಕ್ಯಾಬಿನೆಟ್ ಮೀಟಿಂಗ್ ಮಾಡಿ ಐದು ಗ್ಯಾರಂಟಿಗಳ ಕುರಿತು ಚರ್ಚೆ ಮಾಡಿ ತೀರ್ಮಾನ ಕೈಗೊಂಡಿದ್ದೇವೆ. ಐದು ಗ್ಯಾರಂಟಿಗಳನ್ನು ಈ ಅರ್ಥಿಕ ವರ್ಷದಲ್ಲಿ ಜಾರಿಗೆ ತೆಲು ತೀರ್ಮಾನಿಸಿದ್ದೇವೆ. ಯಾವುದೇ ಭಾಷೆ,ಧರ್ಮ,ಜಾತಿ ಭೇದ ಇಲ್ಲದೆ ಕರ್ನಾಟಕ ಜನತೆಗೆ ನೀಡುತ್ತೇವೆ ಎಂದರು.

ಗ್ಯಾರಂಟಿ ನಂಬರ್ ಒನ್ ಗೃಹ ಜ್ಯೋತಿ:

200 ಯುನಿಟ್ ಉಚಿತ ವಿದ್ಯುತ್ ವಾಗ್ದಾನ ಮಾಡಿದ್ದೇವು. ಈ ಗ್ಯಾರಂಟಿ ಜಾರಿ ಮಾಡಲು ತೀರ್ಮಾನವಾಗಿದೆ. 12 ತಿಂಗಳ ಸರಾಸರಿ ಆಧಾರದಲ್ಲಿ ವಿದ್ಯುತ್ ಉಚಿತ. ಜುಲೈ 1 ರಿಂದ ಆಗಸ್ಟ್ ತಿಂಗಳಿನಿಂದ ಈ ಗ್ಯಾರಂಟಿ ಜಾರಿಯಾಗಲಿದೆ.ಆಗಸ್ಟ್ ತಿಂಗಳಲ್ಲಿ ಬಿಲ್ ಫ್ರಿ ಆರಂಭವಾಗಲಿದೆ.

  1. ಗೃಹ ಲಕ್ಷ್ಮಿ:

ಗೃಹ ಲಕ್ಷ್ಮಿಗೆ ಬ್ಯಾಂಕ್ ಅಕೌಂಟ್, ಆಧಾರ್ ಕಾರ್ಡ್ ಮತ್ತು‌ ಮನೆಯ ಯಜಮಾನಿ ಯಾರು ಎಂಬುವುದನ್ನು ತೀರ್ಮಾನಿಸಬೇಕು. ನಾವು ಹೇಳಿದಂತೆ ಮನೆಯ ಯಜಮಾನಿಗೆ ಎರಡು ಸಾವಿರ ಜಮೆ ಮಾಡುತ್ತೇವೆ. ಜೂನ್ 15 ರಿಂದ ಜುಲೈ 15 ವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆಗಸ್ಟ್ 15 ಪ್ರಕ್ರಿಯೆ ಆರಂಭಿಸಿ ಹಣ ಜಮೆ ಮಾಡುತ್ತೇವೆ. ಎಪಿಎಲ್ ಮತ್ತು ಬಿಪಿಎಲ್ ಎಲ್ಲರಿಗೂ ಜಾರಿಯಾಗಲಿದೆ. ವಿಧವಾ, ವ್ಯದ್ಯಾಪ್ಯ ವೇತನ ಬಿಟ್ಟು ಈ ಯೋಜನೆ ಜಾರಿಯಾಗಲಿದೆ.

ಅನ್ನಭಾಗ್ಯ:

ಎಲ್ಲರಿಗೂ 10 ಕೆ.ಜಿ ಉಚಿತವಾಗಿ ಕೊಡುತ್ತೇವೆ. ಜುಲೈ 1 ರಿಂದ ಎಲ್ಲ ಬಿ.ಪಿ.ಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ 10 ಕೆಜಿ ಆಹಾರ ಧಾನ್ಯ ನೀಡಲಿದ್ದೇವೆ‌. ಜೂನ್ ನಲ್ಲಿ ಈಗಾಗಲೇ ಆಹಾರ ಧಾನ್ಯ ಹೊರಟಿದ್ದು ಮುಂದಿನ ತಿಂಗಳಿನಿಂದ ಜಾರಿಯಾಗಲಿದೆ.

ಶಕ್ತಿ:

ಎಲ್ಲ ಮಹಿಳೆಯರಿಗೆ, ಸ್ಥಾನಮಾನ ಹೊರತಾಗಿ, ವಿದ್ಯಾರ್ಥಿಗಳು ಒಳಗೊಂಡಂತೆ ಜೂನ್ 11 ರಿಂದ ಉಚಿತ ಬಸ್ ಪ್ರಯಾಣ ಜಾರಿ ಮಾಡಲಿದ್ದೇವೆ. ಕರ್ನಾಟಕ ರಾಜ್ಯದೊಳಗೆ ಮಾತ್ರ ಸಿಮೀತವಾಗಿರಲಿದೆ. ಇದು ಕರ್ನಾಟಕದ ಮಹಿಳೆಯರಿಗೆ ಮಾತ್ರ ಸಿಮೀತವಾಗಲಿದೆ. ಎಸಿ, ನಾನ್ ಎಸಿ ಮತ್ತು ರಾಜಹಂಸ ಬಸ್ ಇದರಲ್ಲಿ ಸೇರ್ಪಡೆಯಾಗುವುದಿಲ್ಲ. 94% ಮಹಿಳೆಯರು ಉಚಿತವಾಗಿ ಪ್ರಯಾಣಿಸಿದಂತಾಗುತ್ತದೆ. ಕೆ.ಎಸ್.ಆರ್.ಟಿಸಿ ಬಸ್ ನಲ್ಲಿ ಮಹಿಳೆಯರಿಗೆ 50% ಮೀಸಲಾತಿ ಇರಲಿದೆ.

ಯುವನಿಧಿ:

2022-23 ರಲ್ಲಿ ಉತ್ತೀರ್ಣರಾದ ಎಲ್ಲ ಪದವೀಧರು ಮತ್ತು ಸ್ನಾತಕೋತ್ತರ ಪದವೀಧರರಿಗೆ 3000 ರೂಪಾಯಿ, ಡಿಪ್ಲೋಮಾ ದವರಿಗೆ 1500 ರೂಪಾಯಿ 24 ತಿಂಗಳು ನೀಡಲಿದ್ದೇವೆ. ಖಾಸಗಿ ಅಥವಾ ಸರಕಾರ ನೌಕರಿ ಪಡೆದಿದ್ದರೆ ಅವರಿಗೆ ಅನ್ವಯವಾಗುದಿಲ್ಲ. ಎಲ್ಲರೂ ಅರ್ಜಿ ಸಲ್ಲಿಸಬೇಕು. ಜಾತಿ ಮತ, ಬೇಧ ಬಿಟ್ಟು ನೀಡಲಾಗುವುದು. ಈ ಯೋಜನೆ ಮಂಗಳ ಮುಖಿಯರಿಗೂ ಅನ್ವಯವಾಗುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button