Featured StoryState News

ವಿಧಾನಸೌಧ ಪ್ರವೇಶಕ್ಕೆ ನಕಲಿ ಪಾಸ್ ಬಳಕೆ: ತಪಾಸಣೆ ವೇಳೆ 300 ಕ್ಕೂ ಹೆಚ್ಚು ನಕಲಿ ಪಾಸ್ ಗಳ ವಶಕ್ಕೆ!

ಬೆಂಗಳೂರು: ಬಜೆಟ್ ಮಂಡನೆ ವೇಳೆ ವಕೀಲರೊಬ್ಬರು ಅಕ್ರಮವಾಗಿ ಪ್ರವೇಶಿಸಿ ಶಾಸಕರ ಕುರ್ಚಿಯಲ್ಲಿ‌ ಕುಳಿತಿದ್ದ ಪ್ರಕರಣದ ನಂತರ, ವಿಧಾನಸೌಧದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಭದ್ರತಾ ಸಿಬ್ಬಂದಿಗಳು ಪ್ರತಿಯೊಬ್ಬರ ಮೇಲೆ ನಿಗಾ ವಹಿಸಿ ತಪಾಸಣೆ ನಡೆಸುತ್ತಿದ್ದಾರೆ.

ಈ ತಪಾಸಣೆ ವೇಳೆ ಹಲವರ ಬಳಿ ನಕಲಿ‌ ಪಾಸ್ ಹಾಗೂ ನಕಲಿ ಗುರುತಿನ ಚೀಟಿಗಳು ಪತ್ತೆಯಾಗುತ್ತಿರುವುದು ಕಂಡು ಬಂದಿದೆ. ಈ ಪಾಸ್ ಗಳನ್ನು ಜಪ್ತಿ ಮಾಡುತ್ತಿರುವ ಪೊಲೀಸರು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ.

ತಪಾಸಣೆ ವೇಳೆ ಇದೀಗ 300 ಕ್ಕೂ ಹೆಚ್ಚು ನಕಲಿ ಪಾಸ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ನಕಲಿ ಪಾಸ್​ಗಳ ಹಿಂದಿನ ಉದ್ದೇಶ ಏನಾಗಿತ್ತು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button