
Crime
ಬೀದರ್: ಅಗ್ರಿಕಸ್ ಸಲ್ಯೂಶನ್ಸ್ಸ್ಗೆ ಎಲಿವೆಟ್ ಉನ್ನತಿ ಪ್ರಶಸ್ತಿ
ಬೀದರ್,ಜ.25:- ನಗರದ ಅಗ್ರಿಕಸ್ ಸಲ್ಯೂಶನ್ಸ್ 2020-21 ನೇ ಸಾಲಿನ ಎಲಿವೇಟ್ ಉನ್ನತಿ ಪ್ರಶಸ್ತಿಗೆ ಪಾತ್ರವಾಗಿದೆ.
ವಿಶೇಷ ಸಾಧನೆ ಮಾಡುವ ನವೋದ್ಯಮಗಳಿಗೆ ರಾಜ್ಯ ಸರಕಾರದ ಐಟಿಬಿಟಿ ಇಲಾಖೆಯು ಈ ಪ್ರಶಸ್ತಿ ನೀಡುತ್ತದೆ. ಐಟಿಬಿಟಿ ಖಾತೆಯನ್ನೂ ಹೊಂದಿರುವ ಉಪಮುಖ್ಯಮಂತ್ರಿ ಡಾ. ಸಿಎನ್ ಅಶ್ವತ್ಥನಾರಾಯಣ ಅವರು ಈಚೆಗೆ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಗ್ರಿಕಸ್ ಸಂಸ್ಥೆಯ ಸಿಇಒ ದೀಪಕ ದಿಲ್ಲೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.




