
ತಾಯಿಯ ಎದೆಹಾಲು ಮಗುವಿಗೆ ಅಮೃತವಿದ್ದಂತೆ: ಡಾ. ಆಶಾ
ವಿಜಯಪುರ: ತಾಯಿಯ ಎದೆಹಾಲು ಮಗುವಿಗೆ ಅಮೃತವಿದ್ದಂತೆ ಎಂದು ಬೆಂಗಳೂರಿನ ಚಿಕ್ಕಮಕ್ಕಳ ಹೆಸರಾಂತ ತಜ್ಞ ವೈದ್ಯ ಡಾ. ಆಶಾ ಬೆನಕೊಪ್ಪ ಹೇಳಿದರು.
ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಮಕ್ಕಳ ಶಾಸ್ತ್ರ ವಿಭಾಗ, ಪ್ರಸೂತಿ ಮತ್ತು ಸ್ತ್ರೀರೋಗಶಾಸ್ತ್ರ ವಿಭಾಗದ ಸಹಯೋಗದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ತನ್ಯಪಾನದ ಮಹತ್ವ, ಹಾಲುಣಿಸುವ ವಿಧಾನ, ತಾಯಿ ಮಗುವಿನ ಆರೈಕೆ ಕುರಿತು ಅವರು ಸವಿಸ್ತಾರವಾಗಿ ಮಾಹಿತಿ ನೀಡಿದರು.
ಡಾ. ಎಸ್. ಆರ್. ಬಿದರಿ ಮಾತನಾಡಿ, ಮಗುವಿಗೆ ಹಾಲುಣಿಸುವಾಗ ಸ್ವಚ್ಛತೆಗೆ ಗಮನ ಹರಿಸಬೇಕು. ವೈದ್ಯರು ತಾಯಿಯ ಹಾಲನ್ನೆ ಶಿಫಾರಸ್ಸು ಮಾಡಬೇಕು ಎಂದು ಹೇಳಿದರು.
ಡಾ. ಶ್ರೀಶೈಲ ಗಿಡಗಂಟಿ ಕಾರ್ಯಕ್ರಮದ ನಿರೂಪಿಸಿದರು. ಪ್ರಸೂತಿ ಮತ್ತು ಸ್ತ್ರೂರೋಗ ವಿಭಾಗ ಹಾಗೂ ಚಿಕ್ಕಮಕ್ಕಳ ವಿಭಾಗದ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಸ್ತನ್ಯಪಾನ ಉತ್ತೇಜಿಸುವುದು ಮತ್ತು ವೃತ್ತಿನಿರತ ಪೋಷಕರಲ್ಲಿ ಅರಿವು ಮೂಡಿಸುವುದು ಘೋಷಣೆಯಡಿ ನಡೆದ ಈ ಕಾರ್ಯಕ್ರಮವನ್ನು ಡಾ. ಎಂ. ಬಿ. ಪಾಟೀಲ, ಡಾ. ಎಸ್. ಎಸ್. ಕಲ್ಯಾಣಶೆಟ್ಟರ, ಡಾ. ಆಶಾ ಬೆನಕಪ್ಪ, ಡಾ. ಎಸ್. ಆರ್. ಬಿದರಿ, ಡಾ. ಎಂ. ಎಂ. ಪಾಟೀಲ ಮತ್ತು ಡಾ. ಶ್ರೀಶೈಲ ಗಿಡಗಂಟಿ ಜಂಟಿಯಾಗಿ ಉದ್ಘಾಟಿಸಿದರು.




