
Bengaluru UrbanFeatured Story
ವಿದೇಶದಿಂದ ಅಕ್ರಮವಾಗಿ ಇಲೆಕ್ಟ್ರಾನಿಕ್ ವಸ್ತುಗಳನ್ನು ಸಾಗಣೆ ಮಾಡುತ್ತಿದ್ದ 8 ಜನರ ಬಂಧನ
ಬೆಂಗಳೂರು :ವಿದೇಶದಿಂದ ಅಕ್ರಮವಾಗಿ ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಭಾರಿ ಪ್ರಮಾಣದ ಸಿಗರೇಟ್ ವಸ್ತುಗಳನ್ನು ಸಾಗಣೆ ಮಾಡುತ್ತಿದ್ದ ಎಂಟು ಜನ ಪ್ರಯಾಣಿಕರನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಏಳು ಮಂದಿ ಆರೋಪಿಗಳಿಂದ 21 ಲ್ಯಾಪ್‌ಟಾಪ್‌ಗಳು, 75 ಮೊಬೈಲ್‌ಗಳು, 28 ಮದ್ಯದ ಬಾಟಲಿಗಳು, 7 ಸಾವಿರ ಸಿಗ ರೆಟ್‌ಗಳು ಹಾಗೂ ಓರ್ವ ಮಹಿಳೆಯಿಂದ 248 ಸಿಗರೆಟ್ ಪೊಟ್ಟಣಗಳನ್ನು ವಶಪಡಿಸಿಕೊಳ್ಳಲಾಗಿದೆ.ಕೂಡಲೇ ಆರೋಪಿಗಳನ್ನು ಬಂಧಿಸಿ, ಮಾಲುಗಳನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಕಸ್ಟಮ್ಸ್ ಅಧಿಕಾರಿಗಳು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ ಎಂದು ಹೇಳಲಾಗುತ್ತಿದೆ.




