ಮಣಿಪಾಲ | ಚೂರಿ ಇರಿತ: ನಾಲ್ವರ ಬಂಧನ

ಮಣಿಪಾಲ: ಬ್ರಹ್ಮಾವರ ಮೂಲದ ಯುವಕನಿಗೆ ತಂಡವೊಂದು ಚೂರಿ ಇರಿದ ಘಟನೆ ರವಿವಾರ ತಡರಾತ್ರಿ ಮಣಿಪಾಲದಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಸೈಫ್ ಕುಕ್ಕಿಕಟ್ಟೆ, ಉದಾಫ್ ಚಿಟಾ³ಡಿ, ರಾಹುಲ್‌ ಶೆಟ್ಟಿ ಕಟಪಾಡಿ ಮತ್ತು ಅಫ್ರಿದಿ ದೊಡ್ಡಣಗುಡ್ಡೆ ಬಂಧಿತರು.

ಬ್ರಹ್ಮಾವರದ ನಿವಾಸಿ ಪ್ರತಾಪ್‌ ಅವರು ಗೆಳೆಯರಾದ ತಿಲಕ್‌ ಮತ್ತು ಹರ್ಷಿತ್‌ ಅವರೊಂದಿಗೆ ಮಣಿಪಾಲದಲ್ಲಿ ರಾತ್ರಿ ತಿರುಗಾಡಲು ಹೋಗಿದ್ದಾಗ ಘಟನೆ ನಡೆದಿದೆ ಎಂದು ಮಣಿಪಾಲ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಪ್ರತಿದೂರು
ಅದೇ ರೀತಿ ಉದಾಫ್ , ತನ್ನ ಮೇಲೆ ಪ್ರತಾಪ್‌ ಮತ್ತವರ ತಂಡ ಕೈ ಹಾಗೂ ನಮಗೆ ಕಲ್ಲಿನಿಂದ ಹಲ್ಲೆ ನಡೆಸಿದೆ ಎಂದು ಪ್ರತಿದೂರು ನೀಡಿದ್ದಾರೆ. ಅದರಂತೆ ಈ ಎರಡೂ ಪ್ರಕರಣಗಳು ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ

Latest Indian news

Popular Stories