BidarCrimeFeatured StoryState News
ಬೀದರ : ಲೋಕಾ ಬಲೆಗೆ ಬಿದ್ದ ಎಸ್ ಡಿ ಎ

ಬೀದರ: ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ಹುಡಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಎಸ್ಡಿಎ ಸುನೀಲ್ ಕುಮಾರ ಕಾಜಿ ₹10 ಸಾವಿರ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ತಾಲ್ಲೂಕಿನ ಬೇನ್ ಚಿಂಚೋಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ಶ್ರೀನಿವಾಸ್ ರೆಡ್ಡಿ ಅವರ ಹತ್ತು ತಿಂಗಳ ತುಟ್ಟಿ ಭತ್ಯೆ ಬಿಲ್ ಹಾಗೂ ಒಂದು ತಿಂಗಳ ವೇತನ ಮಾಡುವುದಕ್ಕೆ ಕಾಜಿ ₹20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡ ₹10 ಸಾವಿರ ಪಡೆದು, ಬೀದರ್ನ ಚನ್ನಬಸವ ನಗರದ ಜಮೀನಿನಲ್ಲಿ ಶುಕ್ರವಾರ ಕರೆಸಿಕೊಂಡು ಉಳಿದ ಹಣವನ್ನು ಪಡೆಯುತ್ತಿದ್ದಾಗ ವಶಕ್ಕೆ ಪಡೆಯಲಾಗಿದೆ’ ಎಂದು ಲೋಕಾಯುಕ್ತ ಡಿವೈಎಸ್ಪಿ ನೀಲಪ್ಪ ಓಲೇಕರ್ ತಿಳಿಸಿದ್ದಾರೆ.




